BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕಥಾಗಾರ್ತಿಯಾಗುವುದು ಕನಸು : ಜಸೀರಾ

ಪೈವಳಿಕೆನಗರ, ಫೆ.5: ವೈಕಂ ನನಗೆ ಕಥೆ ಬರೆಯಲು ಸ್ಪೂರ್ತಿ, ಭವಿಷ್ಯದಲ್ಲಿ ಕಥಾಗಾರ್ತಿಯಾಗುವುದು ನನ್ನ ಮಹದಾಸೆ ಎಂದು ಕೇರಳ ರಾಜ್ಯ ವಿದ್ಯಾರಂಗ ಸಾಹಿತ್ಯೋತ್ಸವದ ತ್ರಿದಿನ ಶಿಬಿರದಲ್ಲಿ ಮಲಯಾಳ ಕಥಾರಚನೆಯಲ್ಲಿ ಭಾಗವಹಿಸಿ ಎ ಗ್ರೇಡ್ ಪಡೆದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಆಯಿಷತ್ ಜಸೀರಾ ಪೈನಗರ್ ವಿಷನ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ತರಗತಿಯಲ್ಲಿ ಸ್ಪರ್ಧೆಗೆ ಸೇರಲು ಗುರುಗಳು ಪ್ರೇರಣೆ ನೀಡಿದ್ದಾರೆ, ಉಪಜಿಲ್ಲೆ ಮತ್ತು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ದೊರಕಿದೆ. ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆಂದು ಭಾವಿಸಿರಲಿಲ್ಲ. ನನ್ನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಜಸೀರಾ ತಮ್ಮ ಮನದಾಳದ ಮಾತನ್ನು ಪೈನಗರ್ ವಿಷನ್ ನೊಂದಿಗೆ ಹಂಚಿಕೊಂಡಿದ್ದಾರೆ.ಪ್ರತಿಭೆಗೆ ಪೈನಗರ್ ವಿಷನ್ ನ ತುಂಬು ಹೃದಯದ ಅಭಿನಂದನೆಗಳು.

No comments:

Post a Comment