ಕೌಮಾರ
ಆರೋಗ್ಯ ವಿಚಾರ ಸಂಕಿರಣ
ಪೈವಳಿಕೆನಗರ,
ಫೆ.3
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಸೌಹಾರ್ದ ಕ್ಲಬ್ ನ ಆಶ್ರಯದಲ್ಲಿ
ವಿದ್ಯಾರ್ಥಿಗಳಿಗಾಗಿ ಹದಿಹರೆಯದ
ಮಾನಸಿಕ ಆರೋಗ್ಯ ಎಂಬ ವಿಷಯದಲ್ಲಿ
ಅರಿವು ಮೂಡಿಸುವ ತರಗತಿಗಳು
ನಡೆದವು.
ಮಂಗಳೂರಿನ
ಯೆನೆಪೋಯಾ ಮೆಡಿಕಲ್ ಕಾಲೇಜಿನ
ಮಾನಸಿಕ ಆರೋಗ್ಯ ವಿಭಾಗದ ಸಹಾಯಕ
ಪ್ರಾಧ್ಯಾಪಕರಾದ ಡಾ.
ಅನಿಲ್
ಕಾಕುಂಜೆ ತರಗತಿ ನಡೆಸಿಕೊಟ್ಟರು.
ಹದಿಹರೆಯದ
ವಿವಿಧ ಆಯಾಮಗಳನ್ನು ಪರಿಚಯಿಸಿದ
ಡಾ.
ಕಾಕುಂಜೆ
ಅವರು ವಿದ್ಯಾರ್ಥಿಗಳು ಪರೀಕ್ಷಾ
ಸಮಯದಲ್ಲಿ ಎದುರಿಸುವ ಸಮಸ್ಯೆಗಳಿಂದ
ಮುಕ್ತರಾಗುವ ಬಗ್ಗೆ ಸೂಕ್ತ ಸಲಹೆ
ಸೂಚನೆಗಳನ್ನು ನೀಡಿದರು.
ಅಪರಾಹ್ನ
ದ ತರಗತಿಯಲ್ಲಿ ಉಕ್ಕಿನಡ್ಕ
ಸಹಸ್ರಾಕ್ಷ ಆಸ್ಪತ್ರೆಯ ಡಾ.
ಸಪ್ನಾ
ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯದ
ಬಗ್ಗೆ ತಿಳಿಸಿದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯೋಪಾಧ್ಯಾಯರಾದ
ಶ್ರೀಮತಿ ಶ್ಯಾಮಲಾ ಪಿ ಉಪಸ್ಥಿತರಿದ್ದರು.
ಸೌಹಾರ್ದ
ಕ್ಲಬ್ ನ ಸಂಚಾಲಕರಾದ ಶ್ರೀ ನಾರಾಯಣ
ರಾವ್ ಸ್ವಾಗತಿಸಿ ಶಿಕ್ಷಕರಾದ
ಶ್ರೀ ವಸಂತ ಪಿಬಿ ವಂದಿಸಿದರು.
ಶಿಕ್ಷಕಿಯಾದ
ಕುಮಾರಿ ಉಷಾ ಸಹಕರಿಸಿದರು.
പൈവളികെനഗർ : പൈവളികെനഗർ ഗവ. ഹയർ സെകെൻറരി സ്കൂളിൻറെ സൌഹൃദ ക്ലബ്ബിൻറെ ആഭിമുഖ്യത്തില്
കൌമാര ആരോഗ്യ ബോധവല്കരണ ക്ലാസ് സ്കൂള് ഹാളില് വച്ച് നടന്നു. മംഗളൂരുവിലെ യെനപോയാ മെഡികള് കോളേജ്
ആശുപത്രിയിലെ അസോസിയേട് പ്രൊഫസർ ഡോ. അനില് കാകുഞ്ചെ, ഉക്കിനഡുക്ക സഹസ്രാക്ഷ
ആശുപത്രിയിലെ ഡോ. സപ്നാ ക്ലാസുകള് നടത്തി. പ്രിന്സിപാല് വിശ്വനാഥ കുംബള, ഹെഡ്
മാസ്റർ ശ്യാമളാ, നാരായണ രാവു, വസംത പിബി, ഉഷാ സംബംധിച്ചു.
No comments:
Post a Comment