BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪ್ರಜಾಪ್ರಭುತ್ವ ದಿನಾಚರಣೆ
ಪೈವಳಿಕೆನಗರ, .26 : ಭಾರತದ ಗಣರಾಜ್ಯೋತ್ಸವವನ್ನು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪೈವಳಿಕೆನಗರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ. ಪಿ ರಾಷ್ಟ್ರಧ್ವಜ ಹಾರಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಶುಭಾಶಂಸನೆಗೈದರು. ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ತನುಜಾ 10ಸಿ ಉಪಸ್ಥಿತರಿದ್ದರು. ಎಸ್ ಆರ್ ಜಿ ಕನ್ವಿನರ್ ಕೃಷ್ಣ ಮೂರ್ತಿ ಎಂ. ಎಸ್. ನಿರೂಪಿಸಿದರು. ಅಕ್ಷತಾ 8, ತನುಜಾ 10ಸಿ, ಪ್ರಣಿತಾ 9ಸಿ ಪ್ರಾರ್ಥನೆ ಹಾಡಿದರು. ನಂತರ ಶಾಲಾ ಮುಖ್ಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪ್ರಜ್ಢಾ 8ಡಿ, ಪೂಜಾ 8ಸಿ, ಶ್ರಜ್ಞಾ 7ಸಿ, ಸಹನಾ 7, ಆದಿರಾ 7, ಮೇಘಾ 7ಎ ತಂಡದವರಿಂದ ಜೈ ಹೋ ನೃತ್ಯ ಪ್ರದರ್ಶನ ಜರಗಿತು. ಹಿಂದಿ ಶಿಕ್ಷಕಿಯಾದ ಶ್ರೀಮತಿ ರಜಿತಾ ಮಂಗಳೂರು ಇವರ ನಿರ್ದೇಶನದಲ್ಲಿ ಕಾರ್ತಿಕ್ 8ಸಿ, ಕೌಶಿಕ್ 8ಸಿ, ಅಕ್ಷಯ್ 8ಸಿ, ವಿನೀತ್ 8ಸಿ, ಪ್ರಜ್ವಲ್ 9ಸಿ, ಧೀರಜ್ 8ಸಿ, ಆದರ್ಶ್ 8ಡಿ, ರಜತ್ ಕುಮಾರ್ 9, ಪ್ರಜ್ವಲ್ 8ಡಿ, ಜೋಸ್ಲಿನ್ 9, ಗೌತಮಿ 9ಸಿ, ನಿಧೀಶಾ 9, ಶಾರದಾ 8, ಶಿಫಾನಾ 8ಡಿ, ಜ್ಯೋತಿಕಾ 8ಸಿ, ರಕ್ಷಿತಾ 8ಸಿ, ವೈಭವಿ 8ಸಿ, ನಿಶ್ಮಿತಾ 8, ಸೌಮ್ಯ 8ಸಿ, ಸುಶ್ಮಿತಾ 10ಸಿ ತಂಡದವರಿಂದ ಭಾರತ ಗಣರಾಜ್ಯದ ವಿಶೇಷತೆಗಳನ್ನು ಪ್ರತಿಬಿಂಬಿಸುವ ನೃತ್ಯರೂಪಕ ಪ್ರದರ್ಶನ ವೀಕ್ಷಕರ ಮನಸೂರೆಗೊಂಡಿತು. ಶ್ರೀ ಅಬ್ದುಲ್ ಲತೀಫ್ ಕೊಕ್ಕೆಚಾಲ್ ಕಾರ್ಯಕ್ರಮ ನಿರ್ವಹಿಸಿದರು. ಗಣರಾಜ್ಯೋತ್ಸವದ ನಿಮಿತ್ತ ಮಕ್ಕಳಿಗೆ ಪಾಯಸ ವಿತರಿಸಲಾಯಿತು.

No comments:

Post a Comment