ಕೊಲ್ಲಂ,
ನ.26
: ಕೊಲ್ಲಂನಲ್ಲಿ
ನಡೆದ ಕೇರಳ ರಾಜ್ಯ ಮಟ್ಟದ ವೃತ್ತಿ
ಪರಿಚಯ ಮೇಳದ ಹೈಸ್ಕೂಲ್ ವಿಭಾಗದ
ಎಂಬ್ರೋಯಿಡರಿಯಲ್ಲಿ ಕಾಸರಗೋಡು
ಜಿಲ್ಲೆಯನ್ನು ಪ್ರತಿನಿಧಿಸಿದ
ಪೈವಳಿಕೆನಗರ ಶಾಲೆಯ 10ಸಿ
ತರಗತಿಯ ವಿದ್ಯಾರ್ಥಿನಿ ಹನ್ನತ್
ಬೀಬಿಗೆ ಎ ಗ್ರೇಡ್ ದೊರಕಿದೆ.
ನವೆಂಬರ್
26ರಂದು
ಕಾರ್ಯಕ್ರಮ ನಡೆದಿತ್ತು.
ಸತತ
ಮೂರು ಬಾರಿ ಹನ್ನತ್ ಉಪಜಿಲ್ಲಾ
ಮಟ್ಟದಲ್ಲಿ ಜಯಗಳಿಸಿದ್ದಳು.
ಪಾಠ
ಹಾಗೂ ಪಾಠ್ಯೇತರ ಚಟುವಟಿಕೆಗಳಲ್ಲಿ
ಸದಾ ಮುಂದಿರುವ ಹನ್ನತ್ ಬೀಬಿ
ಮಾತು ಕಡಿಮೆ ದುಡಿಮೆ ಜಾಸ್ತಿ
ಎಂಬ ಬಲ್ಲವರ ಮಾತಿಗೆ ನಿದರ್ಶನವಾಗಿದ್ದಾಳೆ
ಎಂಬುದು ಶಿಕ್ಷಕರ ಉವಾಚ.
ರಾಜ್ಯ
ಮಟ್ಟದಲ್ಲಿ ಗ್ರೇಡ್ ಪಡೆದ ಹನ್ನತ್
ಬೀಬಿಗೆ ಪೈನಗರ್ ವಿಷನ್ ತಂಡವು
ತುಂಬು ಹೃದಯದ ಅಭಿನಂದನೆಗಳನ್ನು
ಸಲ್ಲಿಸುವುದು.
ಈ
ಸಾಧನೆಯ ಹಿಂದಿರುವ ಎಲ್ಲಾ
ಶಿಕ್ಷಕರಿಗೂ ರಕ್ಷಕರಿಗೂ ಧನ್ಯವಾದಗಳು
No comments:
Post a Comment