ಪೈವಳಿಕೆನಗರ
ಶಾಲೆಯಲ್ಲಿ ಸಂಭ್ರಮದ ನಾಡಹಬ್ಬ

ಪೈವಳಿಕೆನಗರ,
ಅ.17
: ಗಡಿನಾಡ
ಕಲಾಸಂಘ ಪೈವಳಿಕೆ ,
ಕನ್ನಡ
ಸಾಹಿತ್ಯ ಪರಿಷತ್ ಕಾಸರಗೋಡು
ಮತ್ತು ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆ ಸಂಯುಕ್ತ
ಆಶ್ರಯದಲ್ಲಿ ಕನ್ನಡ ನಾಡು ನುಡಿ
ಸಂಸ್ಕೃತಿಯ ಪ್ರತೀಕವಾದ ದಸರಾ
ನಾಡಹಬ್ಬ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲಾ ಮುಖ್ಯ
ಸಭಾಂಗಣದಲ್ಲಿ ನಡೆಯಿತು.ಕನ್ನಡ
ಸಾಹಿತ್ಯ ಪರಿಷತ್ ಕೇರಳ ಗಡಿನಾಡ
ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ.
ಭಟ್
ಕಾರ್ಯಕ್ರಮ ದೀಪ ಬೆಳಗಿಸಿ
ಉದ್ಘಾಟಿಸಿದರು.
ರಾಜ್ಯ
ಪ್ರಶಸ್ತಿ ವಿಜೇತ ನಿವೃತ್ತ
ಮುಖ್ಯೋಪಾಧ್ಯಾಯ ಎಂ.
ವಿಶ್ವನಾಥ
ರೈ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ನಿವೃತ್ತ
ಪ್ರಾಂಶುಪಾಲ ಶ್ರೀ ಬೇ.
ಸಿ.
ಗೋಪಾಲಕೃಷ್ಣ
ಭಟ್,
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ.ಪಿ,
ಕನ್ನಡ
ಸಾಹಿತ್ಯ ಪರಿಷತ್ ಕಾರ್ಯದರ್ಶಿ
ಶ್ರೀ ರಾಮಚಂದ್ರ ಭಟ್ ಧರ್ಮತ್ತಡ್ಕ
ಶುಭ ಹಾರೈಸಿದರು.
ಹತ್ತಕಿಂತಲೂ
ಅಧಿಕ ಶಾಲೆಗಳಿಂದ 100ಕ್ಕಿಂತಲೂ
ಅಧಿಕ ವಿದ್ಯಾರ್ಥಿಗಳು ವಿವಿಧ
ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಲಘು
ಸಂಗೀತ,
ದೇಶಭಕ್ತಿಗೀತೆ,
ಭಾಷಣ
ಮುಂತಾದ ಹಲವು ಸ್ಪರ್ಧೆಗಳನ್ನು
ಏರ್ಪಡಿಸಲಾಗಿತ್ತು.
ಎಲ್
ಪಿ ವಿಭಾಗದಲ್ಲಿ ಹೆದ್ದಾರಿ ಶಾಲೆ,
ಯುಪಿ
ವಿಭಾಗದಲ್ಲಿ ಕಾಯರ್ ಕಟ್ಟೆ ಶಾಲೆ,
ಹೈಸ್ಕೂಲ್
ವಿಭಾಗದಲ್ಲಿ ಬೇಕೂರು ಶಾಲೆ,
ಹಯರ್
ಸೆಕೆಂಡರಿ ವಿಭಾಗದಲ್ಲಿ ಪೈವಳಿಕೆನಗರ
ಶಾಲೆ ಸಮಗ್ರ ಪ್ರಶಸ್ತಿಗಳಿಸಿತು.
ಗಡಿನಾಡ
ಕಲಾಸಂಘ ಪೈವಳಿಕೆ ಇದರ ಕಾರ್ಯದರ್ಶಿ
ಶ್ರೀ ರಾಘವ ಬಲ್ಲಾಳ್ ಸ್ವಾಗತಿಸಿ,
ರಾಜ್ಯ
ಪ್ರಶಸ್ತಿ ವಿಜೇತ ನಿವೃತ್ತ
ಮುಖ್ಯೋಪಾಧ್ಯಾಯ ಶ್ರೀ ಮೊಹಮ್ಮದ್
ವಂದಿಸಿದರು.
ನಿವೃತ್ತ
ಮುಖ್ಯೋಪಾಧ್ಯಾಯ ಶ್ರೀ ತಿರುಮಲೇಶ್ವರ
ಭಟ್ ನಿರೂಪಿಸಿದರು.
No comments:
Post a Comment