ಪ್ರೊ.
ಎಂ.
ರಾಮ
ಅಭಿನಂದನಾ ಕಾರ್ಯಕ್ರಮ
ಪೈವಳಿಕೆನಗರ,
ಸೆ.
27: ಶಿಕ್ಷಣ
ತಜ್ಞ,
ಸಂಶೋಧಕ,
ಭಾಷಾಂತರಕಾರ
ಪ್ರೊ.ಎಂ.
ರಾಮ
ಅವರಿಗೆ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯಲ್ಲಿ
ಅಭಿಂನಂದನೆ ಕಾರ್ಯಕ್ರಮ ಜರಗಿತು.
ಪೂರ್ವಾಹ್ನ
ನಿವೃತ್ತ ಉಪನ್ಯಾಸಕರಾದ ಶ್ರೀ
ಪುರುಷೋತ್ತಮ.ಬಿ
ದೀಪ ಬೆಳಗಿಸಿ ಕಾರ್ಯಕ್ರಮವನ್ನು
ಔಪಚಾರಿಕವಾಗಿ ಉದ್ಘಾಟಿಸಿದರು.
ನಂತರ
ಕುಮಾರಿ ಮೇಧಾ,
ಅಂಜಲಿ,
ಭಾವನಾ,
ವಂದನ
ಎಂಬ ವಿದ್ಯಾರ್ಥಿನಿಯರಿಂದ ಭಾವಗೀತೆ
ಕಾರ್ಯಕ್ರಮ ಜರಗಿತು.
ಸಮಿತಿ
ಜತೆ ಕಾರ್ಯದರ್ಶಿ ಹಾಗೂ ಶಾಲಾ
ಪ್ರಭಾರ ಮುಖ್ಯೋಪಾಧ್ಯಾಯರಾದ
ಶ್ರೀ ರವೀಂದ್ರನಾಥ್.
ಕೆ.
ಆರ್
ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ
ಪ್ಲಸ್ ಟು ವಿದ್ಯಾರ್ಥಿನಿಯರಾದ
ಅರ್ಪಿತ,
ಶ್ರುತಿ
ಮತ್ತು ಬಳಗದವರಿಂದ ಪ್ರಾರ್ಥನೆಯೊಂದಿಗೆ
ಉದ್ಘಾಟನಾ ಕಾರ್ಯಕ್ರಮ ಆರಂಭವಾಯಿತು.
ಮಂಜೇಶ್ವರ
ಶಾಸಕರಾದ ಶ್ರೀ ಅಬ್ದುಲ್ ರಸಾಕ್
ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪೈವಳಿಕೆ
ಪಂಚಾಯತ್ ಅಧ್ಯಕ್ಷರಾದ ಶ್ರೀ
ಮಣಿಕಂಠ ರೈ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ನ್ಯಾಯವಾದಿ
ಶ್ರೀ ಎನ್.
ಕೆ.
ಮೋಹನ್
ದಾಸ್ ಪ್ರಾಸ್ತಾವಿಕವಾಗಿ
ಮಾತನಾಡಿದರು.
ಪೈವಳಿಕೆ
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ
ಅಬುಸಾಲಿ,
ಪ್ರಾಧ್ಯಾಪಕರಾದ
ಶ್ರೀ ಜಿ.ಕೆ.ಭಟ್
ಸೇರಾಜೆ,
ಕಾಸರಗೋಡು
ವಿದ್ಯಾಧಿಕಾರ ಶ್ರೀ ವೇಣುಗೋಪಾಲ,
ಸಮಿತಿ
ಅಧ್ಯಕ್ಷರಾದ ಶ್ರೀ ಕೋಚಣ್ಣ
ಶೆಟ್ಟಿ,
ಹಿರಿಯ
ಉಪನ್ಯಾಸಕರಾದ ಶ್ರೀ ಬಿ.
ಪುರುಷೋತ್ತಮ,
ಕಾಸರಗೋಡು
ಎ.ಪಿ.ಒ
ಶ್ರೀ ಕೆ.
ಶ್ರೀನಿವಾಸ,
ನ್ಯಾಯವಾದಿ
ಶ್ರೀ ಉಮೇಶ್,
ಕನ್ನಡ
ಸಾಹಿತ್ಯ ಪರಿಷತ್ ಅಧ್ಯಕ್ಷರಾದ
ಶ್ರೀ ಎಸ್.
ವಿ.
ಭಟ್
ಶುಭ ಹಾರೈಸಿದರು.
ನಿವೃತ್ತ
ಪ್ರಾಶುಪಾಲರಾದ ಶ್ರೀ ಬೇ.ಸಿ.
ಗೋಪಾಲಕೃಷ್ಣ
ಭಟ್ ಸ್ವಾಗತಿಸಿ,
ಕಾರ್ಯದರ್ಶಿ
ಶ್ರೀ ಕುರಿಯ ಗೋಪಾಲಕೃಷ್ಣ ಭಟ್
ವಂದಿಸಿದರು.
ಅಭಿನಂದನ
ಗ್ರಂಥದ ಸಂಪಾದಕರಾದ ಶ್ರೀ ಮುಳಿಯ
ಶಂಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ
ಕಾರ್ಯಕ್ರಮದ ನಂತರ ಶರಣ್ಯ ರೈ
ಅವರಿಂದ ಭರತನಾಟ್ಯ ಜರಗಿತು.
ನಂತರ
ನಡೆದ ವಿಚಾರಗೋಷ್ಟಿ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಪ್ರಾಧ್ಯಾಪಕರಾದ
ಶ್ರೀ ಪಿ.
ಕೃಷ್ಣ
ಭಟ್ ವಹಿಸಿದ್ದರು.
ಶ್ರೀ
ಕುಞ್ಞಿರಾಮನ್ ಮಾಸ್ತರ್ ಪಯ್ಯನ್ನೂರು
ಹಾಗೂ ಶ್ರೀಧರ ಏತಡ್ಕ ಉಪನ್ಯಾಸ
ಮಂಡಿಸಿದರು.
ಪ್ರೊ.
ಎ
ಶ್ರೀನಾಥ್ ಸ್ವಾಗತಿಸಿ,
ಕಾರ್ಯದರ್ಶಿ
ಶ್ರೀ ರಾಘವ ಎನ್ ವಂದಿಸಿದರು.
ಜೊತೆ
ಕಾರ್ಯದರ್ಶಿ ಶ್ರೀ ನಾರಾಯಣ ರಾವ್
ಗೋಷ್ಟಿಯನ್ನು ನಿರ್ವಹಿಸಿದರು.
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
9ಬಿ
ತರಗತಿ ವಿದ್ಯಾರ್ಥಿನಿಯಾದ ಕುಮಾರಿ
ಅಮೃತಾ ಪ್ರಮೋದ್ ಅವರಿಂದ ಜಾನಪದ
ನೃತ್ಯ ಪ್ರದರ್ಶನಗೊಂಡಿತು.
ಭೋಜನ
ವಿರಾಮದ ನಂತರ ಆರಂಭವಾದ ಅಭಿನಂದನ
ಕಾರ್ಯಕ್ರಮದಲ್ಲಿ ಹಂಪಿ
ವಿಶ್ವವಿದ್ಯಾಲಯದ ವಿಶ್ರಾಂತ
ಉಪಕುಲಪತಿಗಳಾದ ಶ್ರೀ ವಿವೇಕ್
ರೈ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ
ಅಧ್ಯಕ್ಷರಾದ ಶ್ರೀ ರಾಘವ ಬಲ್ಲಾಳ್
ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ಕೆ.
ಕಮಲಾಕ್ಷರವರು
ಗ್ರಂಥದ ಬಗ್ಗೆ ಮಾತನಾಡಿದರು.
ಕೇಂದ್ರೀಯ
ವಿಶ್ವವಿದ್ಯಾಲಯದ ಉಪಕುಲಪತಿ
ಡಾ.ಜಿ.
ಗೋಪಕುಮಾರ್
ರಾಮಾಭಿನಂದನ ಗ್ರಂಥ ಬಿಡುಗಡೆಗೊಳಿಸಿದರು.
ಮಂಗಳೂರು
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ
ಶ್ರೀ ಸದಾನಂದ ಪೆರ್ಲ ಅಭಿನಂದನ
ಭಾಷಣ ಮಾಡಿದರು.
ಶ್ರೀ
ಬಿ.ಎಸ್.
ರಾವ್,
ಕೆ.ಟಿ
ಭಟ್,
ಡಾ.
ಸತ್ಯನಾರಾಯಣ
ಭಟ್,
ಡಾ.
ರಾಘವನ್
ನಂಬ್ಯಾರ್,
ಶುಭ
ಹಾರೈಸಿದರು.
ಕೊನೆಯಲ್ಲಿ
ಸನ್ಮಾನಿತರಾದ ಶ್ರೀ ಪ್ರೊ.
ಎಂ
ರಾಮ ಅವರು ಮಾತನಾಡಿದರು.
ಕೋಶಾಧ್ಯಾಕ್ಷರಾದ
ಶ್ರೀ ಎಂ ವಿಶ್ವನಾಥ ರೈ ಸ್ವಾಗತಿಸಿ,
ಕನ್ನಡ
ಸಾಹಿತ್ಯ ಪರಿಷತ್ತು ಕಾರ್ಯದರ್ಶಿ
ಶ್ರೀ ಪಿ.
ರಾಮಚಂದ್ರ
ಭಟ್ ವಂದಿಸಿದರು.
ಪ್ರಧಾನ
ಕಾರ್ಯದರ್ಶಿ ಶ್ರೀ ರತ್ನಾಕರ
ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ
ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ
ವೀರಮಣಿ ಕಾಳಗ ಎಂಬ ಯಕ್ಷಗಾನ ಬಯಲಾಟ
ಪ್ರದರ್ಶನಗೊಂಡಿತು.
( ಪೈನಗರ್
ವಿಷನ್ ಸಾಹಿತ್ಯಲೋಕ ವರದಿ)





No comments:
Post a Comment