ಪೈವಳಿಕೆನಗರ
ಶಾಲೆಯಲ್ಲಿ ವಾಚನಾ ಸಪ್ತಾಹ ಆರಂಭ
ಪೈವಳಿಕೆನಗರ,
ಜೂ.
19 : ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ವಾಚನಾ ಸಪ್ತಾಹ ಶುಭಾರಂಭವಾಗಿದೆ.
ಶಾಲಾ
ಗ್ರಂಥ ಪಾಲಕರಾದ
ರೈನಾ ಟೀಚರ್ ಎಲ್ಲಾ ತರಗತಿಯ
ವಿದ್ಯಾರ್ಥಿಗಳಿಗೆ ಪುಸ್ತಕ
ವಿತರಣೆ ಮಾಡುವ ಮೂಲಕ ವಾಚನಾ
ಸಪ್ತಾಹಕ್ಕೆ ಚಾಲನೆ ನೀಡಿದ್ದಾರೆ.
ವಾಚನಾ
ದಿನಕ್ಕೆ ಸಂಬಂಧಿಸಿದ ಚಾರ್ಟು
ಪ್ರದರ್ಶನ ಜರಗಿತು.
ವಿದ್ಯಾರ್ಥಿಗಳು
ಆಧುನಿಕ ಸ್ಮಾರ್ಟ್ ಯುಗದ ಜಂಜಾಟದಿಂದ
ಅಲ್ಪ ಹಿಂದೆ ಸರಿದು ಒಂದು ವಾರಗಳ
ಕಾಲ ಗ್ರಂಥಗಳ ಅಧ್ಯಯನ ನಿರತರಾಗಲಿದ್ದಾರೆ.
ನಂತರ
ಗ್ರಂಥದ ಆಸ್ವಾದನಾ ಟಿಪ್ಪಣಿ
ತಯಾರಿಸಲಿದ್ದಾರೆ.
ಜೂನ್
22
ಸೋಮವಾರದಂದು
ವಾಚನಾ ಸಪ್ತಾಹದ ವಿವಿಧ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ ಎಂದು ಬಲ್ಲ ಮೂಲಗಳು
ತಿಳಿಸಿವೆ.
(ಪೈನಗರ್
ವಿಷನ್ ವಾಚನಾ ಲೋಕ ವರದಿ)
No comments:
Post a Comment