BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ


ಪೈವಳಿಕೆನಗರ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಶಂಕರನಾರಾಯಣ ಭಟ್ ಬೀಡುಬೈಲು ಅವರಿಗೆ ಶಾಲಾ ಉದ್ಯೋಗಿಗಳ ಸಂಘದ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭವನ್ನು ಮುಖ್ಯ ಶಿಕ್ಷಕ ಇಬ್ರಾಹಿಂ ಬುಡ್ರಿಯ ಉದ್ಘಾಟಿಸಿದರು. ಪೈವಳಿಕೆ ಸಮೀಪದ ಬೀಡುಬೈಲು ಎಂಬಲ್ಲಿ ನಾರಾಯಣ ಭಟ್-ಗೌರಿ ದಂಪತಿಗಳ ಸುಪುತ್ರನಾಗಿ 1971 ಜನಿಸಿದ ಅವರು ಚೇವಾರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾಯರ್ ಕಟ್ಟೆ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಮಂಗಳೂರು ಗಣಪತಿ ಕಾಲೇಜು ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಚೇವಾರು, ಕುಳೂರು, ಬೇಕೂರು, ಕಾಯರ್‍ಕಟ್ಟೆ, ಮೂಡಂಬೈಲು ಶಾಲೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಪೈವಳಿಕೆನಗರ ಶಾಲೆಗೆ ಹೈಸ್ಕೂಲ್ ವಿಭಾಗದ ಶಿಕ್ಷಕರಾಗಿ ಭಡ್ತಿ ಹೊಂದಿದರು. ತಮ್ಮ 25 ವರ್ಷಗಳ ಸಾರ್ಥಕ ಸೇವೆಯಿಂದ ವಿದ್ಯಾರ್ಥಿಗಳ, ರಕ್ಷಕರ, ಊರವರ ಹಾಗೂ ಸಹೋದ್ಯೋಗಿಗಳ ಅಭಿಮಾನವನ್ನು ಗಳಿಸಿದ ಅವರು ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ್ದಾರೆ. ಶಿಕ್ಷಕರಾದ ಪ್ರವೀಣ್ ಕನಿಯಾಲ, ಅಬ್ದುಲ್ ಲತೀಫ್ ಕೊಕ್ಕೆಚಾಲ್, ಶಶಿಕಲ ಕೆ ಮಾತನಾಡಿದರು. ಆಚರಣಾ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಎಂ ಎಸ್ ಸ್ವಾಗತಿಸಿ ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್ ವಂದಿಸಿದರು.

No comments:

Post a Comment