BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********


ಪೈವಳಿಕೆನಗರ ಶಾಲೆಯಲ್ಲಿ ವಿಜ್ಞಾನ ಮೇಳ
ಪೈವಳಿಕೆನಗರ, ಸೆ.30 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಟ್ಟದ ವಿಜ್ಞಾನ, ಗಣಿತ, ಸಮಾಜ, ವೃತ್ತಿಪರಿಚಯ  ಮೇಳ ಜರಗಿತು. ಶಾಲಾ ಸಭಾಂಗಣದಲ್ಲಿ ನಡೆದ ಮೇಳವನ್ನು ಶಾಲಾ ನೌಕರರ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ ಎಸ್ 7ನೇ ತರಗತಿಯ ಚೇತನ್ ರಾಜ್ ತಯಾರಿಸಿದ  ವಿದ್ಯುತ್ ಇಲ್ಲದೆ ಬಲ್ಬು ಬೆಳಗಿಸುವ ಮಾದರಿಯನ್ನು ಕಾರ್ಯಗತಗೊಳಿಸುವುದರ ಮೂಲಕ ಚಾಲನೆ ನೀಡಿದರು. ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಾಗಿ ಭಾಗವಹಿಸಿದ್ದರು. ಆಚರಣಾ ಸಮಿತಿ ಸಂಚಾಲಕರಾದ  ಶಶಿಕಲಾ ಕೆ , ದೈಹಿಕ ಶಿಕ್ಷಕ ಕೆ ಎಂ ಬಲ್ಲಾಳ್, ಅಬ್ದುಲ್ ಲತೀಫ್ ಕೊಕ್ಕೆಚಾಲ್, ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು.

No comments:

Post a Comment