ಪೈವಳಿಕೆನಗರ ಶಾಲೆಯಲ್ಲಿ
ಸಾಕ್ಷ್ಯಚಿತ್ರ ಬಿಡುಗಡೆ
ಪೈವಳಿಕೆನಗರ,ಸೆ.22
: ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯ ಐಟಿ ಕ್ಲಬ್ ನ ವಿದ್ಯಾರ್ಥಿ ಮುದ್ರಿತ ಹಾಗೂ ಆನ್ ಲೈನ್ ಸಾಪ್ತಾಹಿಕವಾದ ಪೈನಗರ್
ವಿಷನ್ ನೇತೃತ್ವದಲ್ಲಿ ಚಿತ್ರೀಕರಿಸಿ ತಯಾರಿಸಿದ ಓಣಂ ಸಾಕ್ಷ್ಯಚಿತ್ರ ವಿಡಿಯೋ ಸಿಡಿ ಬಿಡುಗಡೆ
ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಪಿ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು. ಪೈನಗರ್ ವಿಷನ್
ವಿದ್ಯಾರ್ಥಿ ಸಂಪಾದಕರಾದ ಧ್ವಾನಿಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೈನಗರ್ ವಿಷನ್ ನೇತೃತ್ವದಲ್ಲಿ ಶಾಲಾ ಚಿತ್ರ ಸಹಿತ
ಸುದ್ದಿಗಳು, ವಿದ್ಯಾರ್ಥಿಗಳ ಸೃಜನಾತ್ಮಕ
ಸಾಹಿತ್ಯ ಸೃಷ್ಟಿಗಳ ಮುದ್ರಿತ ‘ಚಿಗುರು’ ತ್ರೈಮಾಸಿಕವನ್ನು ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ
ರವೀಂದ್ರನಾಥ್ ಕೆ ಆರ್ ಬಿಡುಗಡೆ ಮಾಡಿದರು. ಪೈನಗರ್ ವಿಷನ್ ನ ವಿದ್ಯಾರ್ಥಿ ಪ್ರತಿನಿಧಿಗಳಿಗೆ
ಗುರುತಿನ ಚೀಟಿಯನ್ನು ಪೈವಳಿಕೆನಗರ ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ
ಎಸ್ ವಿತರಿಸಿದರು. ವಿದ್ಯಾರ್ಥಿ ಮಾಧ್ಯಮ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ
ಶಾಲಾ ಆಚರಣಾ ಸಮಿತಿ ಸಂಚಾಲಕರಾದ ಶ್ರೀಮತಿ ಶಶಿಕಲಾ ಕೆ ಮಾಧ್ಯಮ ಪ್ರಶಸ್ತಿ ವಿತರಿಸಿದರು. ಪೈನಗರ್
ವಿಷನ್ ವಿದ್ಯಾರ್ಥಿ ವರದಿಗಾರರಾದ 9ಸಿ ತರಗತಿಯ
ಧ್ವಾನಿಷ್ ಪ್ರಥಮ, 7ಸಿ ತರಗತಿಯ ಅಝ್ಮಿ ದ್ವಿತೀಯ, 9ಸಿ ತರಗತಿಯ ಕಾರ್ತಿಕ್ ಕೆ ಹಾಗೂ 10ಎ
ತರಗತಿಯ ರಜತ್ ಕುಮಾರ್ ಎ ಆರ್ ತೃತೀಯ ಸ್ಥಾನಗಳಿಸಿದರು. ಹಯರ್ ಸೆಕೆಂಡರಿ ಉಪನ್ಯಾಸಕರಾದ ಶ್ರೀ
ಅರುಣ್ ರಾಯ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಪೈನಗರ್ ವಿಷನ್ ವಿದ್ಯಾರ್ಥಿ ಪ್ರತಿನಿಧಿ
ಜಗದೀಶ್ ವೈ ಸ್ವಾಗತಿಸಿ, ವಿದ್ಯಾರ್ಥಿ ಉಪಸಂಪಾದಕರಾದ ಕಾರ್ತಿಕ್ ಕೆ ವಂದಿಸಿದರು. ವಿದ್ಯಾರ್ಥಿ
ಪ್ರತಿನಿಧಿ ವೈಶಾಖ್ ಕೆ ಕಾರ್ಯಕ್ರಮ ನಿರ್ವಹಿಸಿದರು. ವೈಭವಿ ಕೆ ಆರ್ ಮತ್ತು ಫಾತಿಮತ್ ಸಹನಾ
ಪ್ರಾರ್ಥನೆ ಹಾಡಿದರು.
No comments:
Post a Comment