BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಓಣಂ ಆಚರಣೆ

ಪೈವಳಿಕೆನಗರ, .10 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿಯ ಶಿಕ್ಷಕರಾದ ಶ್ರೀ ರತ್ನಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ಪಿ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಎಸ್ ಆರ್ ಜಿ ಸಂಚಾಲಕರಾದ ಶ್ರೀ ರವೀಂದ್ರನಾಥ್ ಕೆ ಆರ್, ಆಚರಣಾ ಸಮಿತಿ ಸಂಚಾಲಕರಾದ ಶ್ರೀಮತಿ ಶಶಿಕಲಾ, ಶ್ರೀ ರಾಧಾಕೃಷ್ಣನ್ ಮಾತನಾಡಿದರು. ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂ ಎಸ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಶ್ರೀಮತಿ ಮರಿಯಾ ಪುಷ್ಪಾ ನೇತೃತ್ವದಲ್ಲಿ ಶಾಲಾ ಶಿಕ್ಷಕಿಯರಿಂದ ತಿರುವಾದಿರ ನೃತ್ಯ ಹಾಗೂ ಶ್ರೀ ರಾಧಾಕೃಷ್ಣನ್ ನೇತೃತ್ವದಲ್ಲಿ ಜಾನಪದ ಗೀತೆ ಕಾರ್ಯಕ್ರಮ ನಡೆಯಿತು. 9ಎ ತರಗತಿಯ ಕೌಶಿಕ್ ಮಾವೇಲಿ ವೇಷದೊಂದಿಗೆ, ಕಾರ್ತಿಕ್ ಹುಲಿವೇಷದೊಂದಿಗೆ, ಚೆಂಡೆವಾದನದಲ್ಲಿ ಪೈವಳಿಕೆನಗರ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳಿಗಾಗಿ ಹೂರಂಗೋಲಿ ಸ್ಪರ್ಧೆ,ಲಿಂಬೆ ಚಮಚ ಓಟ, ಗೋಣಿ ಚೀಲ ಓಟ, ಬಾಟ್ಲಿಗೆ ನೀರು ತುಂಬಿಸುವುದು, ಸುಂದರಿಗೆ ಬೊಟ್ಟು ಇಡುವುದು, ಸಂಗೀತ ಕುರ್ಚಿ, ಸಂಗೀತ ಟೊಪ್ಪಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳು ಜರಗಿದವು.ಹೈಸ್ಕೂಲ್ ರಂಗೋಲಿ ಸ್ಪರ್ಧೆಯಲ್ಲಿ 9ಎ ತರಗತಿ ಪ್ರಥಮ, 10ಎ ತರಗತಿ ದ್ವಿತೀಯ, ಯುಪಿ ವಿಭಾಗದಲ್ಲಿ 7ಬಿ ಪ್ರಥಮ, 7ಸಿ ದ್ವಿತೀಯ, ಹಯರ್ ಸೆಕೆಂಡರಿ ವಿಭಾಗದಲ್ಲಿ ಪ್ಲಸ್ ವನ್ ಕಾಮರ್ಸ್ ಪ್ರಥಮ, ಪ್ಲಸ್ ವನ್ ಸೈನ್ಸ್ ದ್ವಿತೀಯ ಸ್ಥಾನಗಳಿಸಿತು. ಮಧ್ಯಾಹ್ನ ವಿವಿಧ ಭಕ್ಷ್ಯಗಳೊಂದಿಗೆ ಓಣಂ ಔತಣ ಏರ್ಪಡಿಸಲಾಗಿತ್ತು.

No comments:

Post a Comment