ಗುಬ್ಬಿ
ಜೀವ ಕಾಪಾಡಿದ 8ಸಿ
ವಿದ್ಯಾರ್ಥಿಗಳು
ಪೈವಳಿಕೆನಗರ,
ಫೆ.5
: ಸಂಘ
ಜೀವನ,
ಸಹಕಾರ,
ಪರಸ್ಪರಾವಲಂಬನೆ,
ಒಗ್ಗಟ್ಟು
ಮುಂತಾದ ಗುಣಗಳನ್ನು ನಾವು
ಪಕ್ಷಿಗಳಿಂದ ಕಲಿಯಬೇಕು.
ಮಾನವೀಯತೆಯು
ಮಾನವನಲ್ಲಿ ಮರೆಯಾಗುತ್ತಿರುವ
ಈ ಕಾಲಘಟ್ಟದಲ್ಲಿ ಮಾನವೀಯತೆ
ಮರೆದ 8ಸಿ
ವಿದ್ಯಾರ್ಥಿಗಳು ಇತರರಿಗೆ
ಮಾದರಿಯಾಗಿದ್ದಾರೆ.
ಕಳೆದ
ಗುರುವಾರ ಪೂರ್ವಾಹ್ನ 11.30ರ
ಸಮಯದಲ್ಲಿ ಪ್ಲಸ್ ವನ್ ತರಗತಿ
ಮುಂಭಾಗದ ನೀರಿನ ಟೇಪ್ ನ ಸಮೀಪ
ಗುಬ್ಬಿ ಮರಿಯೊಂದು ಗಾಯಗೊಂಡು
ಬಿದ್ದಿರುವುದನ್ನು ವಿದ್ಯಾರ್ಥಿಗಳು
ಗಮನಿಸಿದರು.
ತಕ್ಷಣವೇ
ಕಾರ್ಯ ಪ್ರವೃತ್ತರಾದ ವಿದ್ಯಾರ್ಥಿಗಳು
ಹಕ್ಕಿಯನ್ನು ತಮ್ಮ ತರಗತಿಗೆ
ತಂದು ತಕ್ಕ ಚಿಕಿತ್ಸೆಯನ್ನು
ಮಾಡಿ ಆಹಾರ ನೀರನ್ನು ನೀಡಿದರು.
ತಮ್ಮ
ತರಗತಿಯಲ್ಲಿ ಅದನ್ನು ಉಪಚರಿಸಿದ್ದು
ಮಾತ್ರವಲ್ಲದೇ ಒಂದು ಗೂಡನ್ನು
ನಿರ್ಮಿಸಿರುವರು.
ಗುಬ್ಬಿ
ಹಕ್ಕಿಯ ತಾಯಿ ಬಂದು ಮರಿಯನ್ನು
ನೋಡಿ ಸಂತೋಷಪಟ್ಟಿತು ಎಂದು 8ಸಿ
ವಿದ್ಯಾರ್ಥಿಗಳು ಪೈನಗರ್ ವಿಷನ್
ಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ
ಈ ಮಾನವೀಯ ಸೇವೆಗೆ ಪೈನಗರ್ ವಿಷನ್
ಧನ್ಯವಾದಗಳನ್ನು ಸಲ್ಲಿಸುವುದು.
(ವೈಭವಿ.ಕೆ.ಆರ್
8ಸಿ
ತರಗತಿ)
No comments:
Post a Comment