ಸಂವಿಧಾನ
ರಚನಾ ದಿನ
ಪೈವಳಿಕೆನಗರ,
ನ.26
: ಭಾರತದ
ಸಂವಿಧಾನ ರಚನಾ ದಿನವನ್ನು
ಪೈವಳಿಕೆನಗರ ಶಾಲೆಯಲ್ಲಿ
ಆಚರಿಸಲಾಯಿತು.
ಬೆಳಗ್ಗೆ
ಕರೆದ ವಿಶೇಷ ಅಸೆಂಬ್ಲಿಯಲ್ಲಿ
ಶಾಲಾ ನಾಯಕಿ ಸಂವಿಧಾನ ಪ್ರತಿಜ್ಞೆಯನ್ನು
ಬೋಧಿಸಿದರು.
ಸಂವಿಧಾನದ
ಬಗ್ಗೆ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಪಿ.
ಮಾತನಾಡಿದರು.
ಪ್ರಭಾರ
ಪ್ರಾಂಶುಪಾಲರಾದ ಶ್ರೀ ವಿಶ್ವನಾಥ
ಕುಂಬಳೆ ಉಪಸ್ಥಿತರಿದ್ದರು.
ಭಾರತದ
ಸಂವಿಧಾನ ಮತ್ತು ಜಾತ್ಯಾತೀತತೆ
ಬಗ್ಗೆ ಹೈಸ್ಕೂಲ್ ಮತ್ತು ಹಯರ್
ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗಾಗಿ
ಪ್ರಬಂಧ ಸ್ಪರ್ಧೆ ನಡೆಯಿತು.
ಸಂವಿಧಾನದ
ಕುರಿತು ವಿಶೇಷ ತರಗತಿಯನ್ನು
ಏರ್ಪಡಿಸಲಾಗಿತ್ತು.
ಸಮಾಜ
ವಿಜ್ಞಾನ ವಿಭಾಗದ ಶ್ರೀ ಅಬ್ದುಲ್
ಲತೀಫ್ ಕೊಕ್ಕೆಚಾಲ್,
ಶ್ರೀ
ಉಣ್ಣಿಕೃಷ್ಣನ್ ನೇತೃತ್ವ ನೀಡಿದರು.
No comments:
Post a Comment