BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ಶಾಲಾ ಮೇಳಗಳು
ಪೈವಳಿಕೆನಗರ, .3 ಪೈವಳಿಕೆನಗರ ಶಾಲೆಯಲ್ಲಿ ಶಾಲಾ ಮಟ್ಟದ ವಿಜ್ಞಾನ, ಗಣಿತ, ಸಮಾಜವಿಜ್ಞಾನ, ವೃತ್ತಿಪರಿಚಯ ಮೇಳಗಳು ಅಕ್ಟೋಬರ್ 3ರಂದು ನಡೆದವು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ. ಪಿ ವಿಜ್ಞಾನದ ಕುಂಬಳಕಾಯಿ ರಾಕ್ಷಸ ಮಾದರಿಯನ್ನು ಬಟನ್ ಒತ್ತುವುದರ ಮೂಲಕ ಉದ್ಘಾಟಿಸಿದರು. ಸಮಾಜ ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್ ಲತೀಫ್, ವಿಜ್ಞಾನ ಕ್ಲಬ್ ನ ಕೃಷ್ಣ ಮೂರ್ತಿ ಎಂ.ಎಸ್, ಸ್ಟಾಫ್ ಸೆಕ್ರೆಟರಿ ಶ್ರೀಮತಿ ಶಶಿಕಲಾ ಶುಭಾಶಂಸನೆಗೈದರು. ಮಣ್ಣಿನ ವಿವಿಧ ಮೂರ್ತಿಗಳು, ಗಣಿತದ ವಿವಿಧ ಚಾರ್ಟುಗಳು, ವಿಜ್ಞಾನದ ವಿವಿಧ ಮಾದರಿಗಳು , ತಯಾರಿಸಿದ ಪುಸ್ತಕ ಗಳು, ಮಣಿಯಿಂದ ತಯಾರಿಸಿದ ಮಾಲೆಗಳು, ವಿವಿಧ ಬಟ್ಟೆಗಳು, ಅಗರಬತ್ತಿ ನೋಡುಗರ ಮನಸೆಳೆದವು. ಪೂರ್ವಾಹ್ನ 10.30ಕ್ಕೆ ಆರಂಭವಾದ ಕಾರ್ಯಕ್ರಮ 12.45ಕ್ಕೆ ಸಮಾರೋಪಗೊಂಡಿತು

1 comment:

  1. ಮಕ್ಕಳ ಸಾಮರ್ಥ್ಯಗಳನ್ನು ಬೆಳಕಿಗೆ ತರಲು ವೇದಿಕೆ ಒದಗಿಸುವುದು ನಮ್ಮ ಕರ್ತವ್ಯ

    ReplyDelete