ವಿಶ್ವ
ವೃದ್ಧರ ದಿನಾಚರಣೆ
ಪೈವಳಿಕೆನಗರ,
ಅ.6
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ವಿಶ್ವ ವಯೋವೃದ್ಧರ ದಿನಾಚರಣೆಯನ್ನು
ಆಚರಿಸಲಾಯಿತು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಲಾರೆನ್ಸ್ ಡಿಸೋಜಾ ಅಧ್ಯಕ್ಷತೆ
ವಹಿಸಿದ್ದರು.
ಪೈವಳಿಕೆಯ
ಹಿರಿಯ ನಾಗರಿಕರಾದ ಶ್ರೀ ತಿರುಮಲೇಶ್ವರ
ಭಟ್,
ಶ್ರೀ
ಅಬ್ದುಲ್ಲ ಹಾಜಿ,
ಶ್ರೀ
ಇದ್ದಿನ್ ಕುಞ್ಞ ಅವರನ್ನು ಫಲ
ಪುಷ್ಪ ಕಿರುಕಾಣಿಕೆಗಳನ್ನು ನೀಡಿ
ಗೌರವಿಸಲಾಯಿತು.
ಸನ್ಮಾನಿತರು
ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ
ಹಂಚಿಕೊಂಡರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ
ಶಾಲಾ ಆಪ್ತ ಸಮಾಲೋಚಕರಾದ ರಜಿತಾ
ಧನ್ಯವಾದ ಸಲ್ಲಿಸಿದರು.
ಉಪನ್ಯಾಸಕರಾದ
ಶ್ರೀ ವಸಂತ ನಿರೂಪಿಸಿದರು.
No comments:
Post a Comment