BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಹಿರೋಶಿಮಾ ದಿನಾಚರಣೆ
ಪೈವಳಿಕೆನಗರ, .6: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಹಿರೋಶಿಮಾ ದಿನಾಚರಣೆಯನ್ನು ವಿಶ್ವಶಾಂತಿಗಾಗಿ ಆಚರಿಸಲಾಯಿತು. ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ಕೆ.ಆರ್. ಕ್ಯಾನ್ ವಾಸಿನಲ್ಲಿ ವಿಶ್ವ ಶಾಂತಿಯ ಸಂಕೇತವಾದ ಪಾರಿವಾಳದ ಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅದ್ಯಕ್ಷತೆ ವಹಿಸಿದ್ದರು. ಯುದ್ಧ ವಿರುದ್ಧವಾದ ಶಾಂತಿ ಜಗತ್ತಿನ ನಿರ್ಮಾಣಕ್ಕೆ ಬೇಕಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ವಿಶ್ವಶಾಂತಿಯ ಸಂಬಂಧವಾಗಿ ಸಾಮೂಹಿಕ ಚಿತ್ರರಚನೆ ಹಾಗೂ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೈಸ್ಕೂಲ್ ವಿಭಾಗದಲ್ಲಿ ಕಾರ್ತಿಕ್.ಕೆ ಪ್ರಥಮ, ಶಾಮಿನಾ ದ್ವಿತೀಯ, ಯುಪಿ ವಿಭಾಗದಲ್ಲಿ ನಫೀಸತ್ ಮಿಸ್ರಿಯಾ ಪ್ರಥಮ, ಪಾತಿಮತ್ ರಿಹಾನಾ ದ್ವಿತೀಯ, ಎಲ್ ಪಿ ವಿಭಾಗದಲ್ಲಿ ನಿಧಿ ಶೆಟ್ಟಿಗಾರ್ ಪ್ರಥಮ, ರೀಮಾ ಡಿಸೋಜಾ ದ್ವಿತೀಯ ಸ್ಥಾನಗಳಿಸಿದರು. ವಿದ್ಯಾರ್ಥಿಗಳಿಂದ ಯುದ್ಧವಿರೋಧಿ ರಾಲಿ ನಡೆಯಿತು. ಸಮಾಜ ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್ ಲತೀಫ್ ಸ್ವಾಗತಿಸಿ ಮಲಯಾಳ ವಿಭಾಗದ ಉಣ್ಣಿಕೃಷ್ಣನ್ ವಂದಿಸಿದರು. ಶಿಕ್ಷಕರಾದ ರಾಜು., ಜಿಲ್ಜೋ ಎನ್, ರೇಶ್ಮಾ, ವತ್ಸಲಾ, ಸಂತೋಷ್, ಕವಿತಾ, ಶ್ರೀಲತಾ, ಸ್ವರ್ಣಲತಾ ನೇತೃತ್ವ ನೀಡಿದರು.

പൈവളികെ നഗർ: പൈവളികെ നഗർ ഗവൺമെൻറ് ഹയർ സെക്കണ്ടറി സ്ക്കൂളിൽ ഹിരോഷിമ ദിനാചരണം വിപുലമായി ആചരിച്ചു. ഹെഡ്മാസ്റ്റർ ഇൻ ചാർജ്ജ് ശ്രീ. കെ.ആർ. രവീന്ദ്രനാഥ് മാസ്റ്റർ സമാധാനത്തിൻറെ ചിഹ്നമായ വെള്ളരിപ്രാവന്റെ ചിത്രം ക്യാൻവാസിൽ വരച്ച് പരിപാടി ഉദ്ഘാടനം ചെയ്തു. സ്റ്റാഫ് സെക്രട്ടറി ശ്രീമതി ശശികല റ്റീച്ചർ അദ്ധ്യക്ഷത വഹിച്ചു. യുദ്ധവിരുദ്ധ പ്രതിജ്ഞ, ക്വിസ്, ചിത്രരചനാ മത്സരം എന്നിവ സംഘടിപ്പിച്ചു. പൈവളികെ ടൗണിലൂടെ കുട്ടികളുടെ യുദ്ധവിരുദ്ധ റാലി നടന്നു. സോഷ്യൽ സയൻസ് ക്ലബ്ബ് സെക്രട്ടറി അബ്ദുൾ ലത്തീഫ് മാസ്റ്റർ സ്വാഗതവും, ഉണ്ണികൃഷ്ണൻ മാസ്റ്റർ നന്ദിയും പറഞ്ഞു. അധ്യാപകരായ എ. രാജു, ജിൽജോ. എൻ , റെയ്ന ഇവറ്റ് ഡിസൂസ, രേഷ്മ, കുമാരി വത്സല, കവിത, ശ്രീലത, സ്വർണലത തുsങ്ങിയവർ നേതൃത്വം നൽകി.

No comments:

Post a Comment