BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಡಾ..ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಕಣ್ಣೀರ ವಿದಾಯ
 ಪೈವಳಿಕೆನಗರ, ಜು. 28 ಮಾಜಿ ರಾಷ್ಟ್ರಪತಿ ಡಾ.ಎಪಿ.ಜೆ ಅಬ್ದುಲ್ ಕಲಾಂ ಅವರು ಇನ್ನಿಲ್ಲ. ಪತ್ರಿಕೆ ಹಂಚುವ ಕೆಲಸ ಮಾಡಿ ಬದುಕು ಆರಂಭಿಸಿದ ಕಲಾಂ ಅವರ ವ್ಯಕ್ತಿತ್ವ ವಿಜ್ಞಾನಿಯಾಗಿ, ಮಿಸೈಲ್ ರಂಗದ ನಾಯಕನಾಗಿ ಭಾರತದ ಹೆಸರನ್ನು ವಿಶ್ವವೇ ಅಚ್ಚರಿಯಿಂದ ನೆನಪಿಸುವಂತೆ ಮಾಡಿದ್ದು ವಿಶೇಷ. ಕಲಾಂ ಅವರ ಅಗಲಿಕೆ ದೇಶಕ್ಕೆ ದೊಡ್ಡ ನಷ್ಟ. ಅವರ ಅಗಲಿಕೆಗೆ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಸಂತಾಪ ಸೂಚಿಸುವುದು. ಮಂಗಳವಾರ ವಿಶೇಷ ಅಸೆಂಬ್ಲಿ ಯಲ್ಲಿ ಕಲಾಂ ಅವರ ಸಾಧನೆಗಳ ಬಗ್ಗೆ ತಿಳಿಸಲಾಯಿತು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಪ್ರಿನ್ಸಿಪಾಲ್ ಶ್ರೀ ಜೋರ್ಜ್ ಜೋಸೆಫ್, ಅಬ್ದುಲ್ ಲತೀಫ್, ಜಿಲ್ಜೋ ಎನ್ ಮಾತನಾಡಿದರು. ಸಂತಾಪ ಸೂಚಿಸಲು ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಶಾಲಾ ಇಂಗ್ಲೀಷ್ ಕ್ಲಬ್ ನ ವತಿಯಿಂದ ಕಲಾಂ ಅವರ ಬದುಕನ್ನು ಪ್ರತಿಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

No comments:

Post a Comment