SARVA SHIKSHA ABHIYAN KASARAGOD | ||||||||
BRC MANJESHWAR | ||||||||
PEC PAIVALIKE | ||||||||
SCIENCE SEMINAR at GHSS PAIVALIKENAGAR on 10/02/2015 | ||||||||
First Place | Second Place | |||||||
Fifth Standard | SINJITHA. K & Party, AUPS Dharmathadka | THUSHAR.M & Party, SSAUPS Chevar | ||||||
Sixth Standard | KRITHIKA. P & Party, AUPS Dharmathadka | MEDHA.N & Party, GHSS Paivalike | ||||||
Seventh standard | KSHITHEESHA.C.S & Party, SSAUPS Chevar | ADHITHYA E.H. & Party, AUPS Dharmathadka |
*ಪೈವಳಿಕೆನಗರ
ಶಾಲೆಯಲ್ಲಿ ಬಾಲವಿಜ್ಞಾನ
ಸಂಗಮ
ಪೈವಳಿಕೆನಗರ, ಫೆ.10 : ನಮ್ಮ ನಾಡಿನ ಬಾಲ ಪ್ರತಿಭೆಗಳಿಗೂ ಅಬ್ದುಲ್ ಕಲಾಂ ಅವರಂತೆ ವಿಜ್ಞಾನಿಯಾಗಲು ಸಾಧ್ಯವಿದೆ. ಸೆಮಿನಾರ್ ನಂತಹ ಕಾರ್ಯಕ್ರಮಗಳು ಅದಕ್ಕೆ ವೇದಿಕೆಯಾಗಲಿ ಎಂದು ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ದೇವು ಮೂಲ್ಯ ಅಭಿಪ್ರಾಯಪಟ್ಟರು. ಅವರು ಕಾಸರಗೋಡು ಸರ್ವ ಶಿಕ್ಷಾ ಅಭಿಯಾನದ ಪ್ರಾಯೋಜಕತ್ವದಲ್ಲಿ, ಬಿ .ಆರ್.ಸಿ. ಮಂಜೇಶ್ವರದ ನೇತೃತ್ವದಲ್ಲಿ, ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸಮಿತಿಯ ಸಹಯೋಗದೊಂದಿಗೆ ಪೈವಳಿಕೆ ಪಂಚಾಯತ್ ಮಟ್ಟದ ವಿಜ್ಞಾನ ಸೆಮಿನಾರ್ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಕೆ ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ ಕಾಯರ್ ಕಟ್ಟೆ ಸರಕಾರಿ ಎಲ್ ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚನಿಯಪ್ಪ ಶುಭಾಶಂಸನೆ ಮಾಡಿದರು. ಬಿ ಆರ್ ಸಿ ಟ್ರೈನರ್ ಜೋಯ್ ಸ್ಪರ್ಧೆಯ ಮಾಹಿತಿ ನೀಡಿದರು. ತೀರ್ಪುಗಾರರಾದ ಸುಕೇಶ್ ಮೂಡಂಬೈಲ್, ನಿವೃತ್ತ ಮುಖ್ಯೋಪಾಧ್ಯಾಯರಾದ ನರಸಿಂಹ ಬಲ್ಲಾಳ್, ಶಾಲಾ ಉದ್ಯೋಗಿಗಳ ಸಂಘದ ಕಾರ್ಯದರ್ಶಿಯಾದ ಶ್ರೀ ರವೀಂದ್ರನಾಥ್ .ಕೆ.ಆರ್, ದೈಹಿಕ ಶಿಕ್ಷಕ ಶ್ರೀ ವಿಶ್ವನಾಥ ಅಮ್ಮೇರಿ ಮಾತನಾಡಿದರು. ಪೈವಳಿಕೆ ಪಂಚಾಯತಿಗೊಳಪಟ್ಟ ಎಲ್ಲಾ ಯುಪಿ ಶಾಲೆಗಳಿಂದ ವಿಜ್ಞಾನ ಪ್ರತಿಭೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಧರ ಭಟ್ ಬೀಡುಬೈಲು ಸೆಮಿನಾರ್ ಮೋಡರೇಟರ್ ಆಗಿ ಸಹಕರಿಸಿದರು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಐದನೇ ತರಗತಿ ಮಟ್ಟದ ಸ್ಪರ್ಧೆಯಲ್ಲಿ ಎ.ಯು.ಪಿ.ಎಸ್. ಧರ್ಮತ್ತಡ್ಕದ ಸಿಂಜಿತಾ ಕೆ. ಮತ್ತು ಬಳಗ ಪ್ರಥಮ, ಎಸ್.ಎಸ್.ಎ.ಯು.ಪಿ.ಎಸ್ ಚೇವಾರಿನ ತುಷಾರ್ ಎಂ. ಮತ್ತು ಬಳಗ ದ್ವಿತೀಯ, ಆರನೇ ತರಗತಿ ಮಟ್ಟದ ಸ್ಪರ್ಧೆಯಲ್ಲಿ ಎ.ಯು.ಪಿ.ಎಸ್. ಧರ್ಮತ್ತಡ್ಕದ ಕೃತಿಕಾ.ಪಿ ಮತ್ತು ಬಳಗ ಪ್ರಥಮ, ಜಿ.ಎಚ್.ಎಸ್.ಎಸ್. ಪೈವಳಿಕೆಯ ಮೇಧಾ ಎನ್. ಮತ್ತು ಬಳಗ ದ್ವಿತೀಯ, ಏಳನೇ ತರಗತಿ ಮಟ್ಟದ ಸ್ಪರ್ಧೆಯಲ್ಲಿ ಎಸ್.ಎಸ್.ಎ.ಯು.ಪಿ.ಎಸ್ ಚೇವಾರಿನ ಕ್ಷಿತೀಶಾ.ಸಿ.ಎಸ್ ಮತ್ತು ಬಳಗ ಪ್ರಥಮ, ಎ.ಯು.ಪಿ.ಎಸ್. ಧರ್ಮತ್ತಡ್ಕದ ಆದಿತ್ಯ ಇ.ಎಚ್. ಮತ್ತು ಬಳಗ ದ್ವಿತೀಯ ಸ್ಥಾನಗಳಿಸಿದ್ದಾರೆ. ಏಳನೇ ತರಗತಿ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಸ್ಪರ್ಧಿಗಳು ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀಧರ ಭಟ್ ಬೀಡುಬೈಲು ಸ್ವಾಗತಿಸಿ ಇಕೋ ಕ್ಲಬ್ ಸಂಚಾಲಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು. ಶಿಕ್ಷಕರಾದ ಶ್ರೀ ಪ್ರವೀಣ್ ಕನಿಯಾಲ ಕಾರ್ಯಕ್ರಮ ನಿರೂಪಿಸಿದರು.(ಪೈನಗರ್ ವಿಷನ್ ವಿಜ್ಞಾನ ಪ್ರತಿನಿಧಿ ವರದಿ)
No comments:
Post a Comment