BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಕೊಯ್ಲು ಉತ್ಸವ


ಪೈವಳಿಕೆನಗರ, .22 : ಶಾಲಾ ಮಧ್ಯಾಹ್ನದೂಟ ಸಮಿತಿ, ಇಕೋ ಕ್ಲಬ್, ಆರೋಗ್ಯ ಕ್ಲಬ್ ಸಹಭಾಗಿತ್ವದಲ್ಲಿ ನಡೆಸಿದ ಶಾಲಾ ತರಕಾರಿ ತೋಟದ ಬೆಳೆ ಕೊಯ್ಲು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಸೊರೆಕಾಯಿಯನ್ನು ಕೊಯ್ದು ಕಾರ್ಯಕ್ರಮ ಉದ್ಘಾಟಿಸಿದರು. ಪೈವಳಿಕೆ ಕೃಷಿ ಭವನದ ಅಧಿಕಾರಿ ಶ್ರೀ ದೇವರಾಜನ್ ಶುಭಾಶಂಸನೆ ಮಾಡಿದರು. ಉಪಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕಂಚಿಕಟ್ಟೆ, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್, ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ, ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್., ಶ್ರೀಮತಿ ಶಶಿಕಲಾ, ಶ್ರೀ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಶಾಲಾ ಬಿಸಿಯೂಟ ಯೋಜನಾ ವ್ಯವಸ್ಥಾಪಕರಾದ ಶ್ರೀ ಸುನೀಶ್ ಕುಮಾರ್, ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಹಾಗೂ ಆರೋಗ್ಯ ಕ್ಲಬ್ ಸಂಚಾಲಕರಾದ ಶ್ರೀ ರವೀಂದ್ರನಾಥ್ ಕೆ.ಆರ್.,ಇಕೋ ಕ್ಲಬ್ ಸಂಚಾಲಕರಾದ ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ , ಬಿಸಿಯೂಟ ಸಹಾಯಕಿಯರಾದ ಶ್ರೀಮತಿ ಗಿರಿಜಾ ಸಹಕರಿಸಿದರು. ತರಕಾರಿ ಗಿಡಗಳ ಪೋಷಣೆಯ ಹೊಣೆ ಹೊತ್ತ ವಿದ್ಯಾರ್ಥಿಗಳಾದ ಅಬ್ದುಲ್ ಶಾಕಿರ್, ರೋಹಿತ್ ಮೊಂತೆರೋ, ನಿಝಾಮುದ್ದೀನ್, ಲಕ್ಷ್ಮೀಶ, ರಕ್ಷಣ್ ರೈ, ಧನುಷ್, ಮಹೇಶ್ ನಡೆಸಿಕೊಟ್ಟರು.

No comments:

Post a Comment