BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ರನ್ ಕೇರಳ ರನ್


ಪೈವಳಿಕೆನಗರ, .20: ರಾಷ್ಟ್ರೀಯ ಕ್ರೀಡಾಕೂಟದ ಅಂಗವಾಗಿ ಕೇರಳದ ಎಲ್ಲಾ ಕೇಂದ್ರಗಳಲ್ಲಿ ರನ್ ಕೇರಳ ರನ್ ಕಾರ್ಯಕ್ರಮ ಕೇರಳಾದ್ಯಂತ ಜರಗಿತು. ಪೈವಳಿಕೆ ಪಂಚಾಯತ್ ಮಟ್ಟದ ಕಾರ್ಯಕ್ರಮ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಕ್ಷ ಶ್ರೀ ಮಣಿಕಂಠ ರೈ ಉದ್ಘಾಟಿಸಿದರು. ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷ ಶ್ರೀ ದೇವು ಮೂಲ್ಯ, ಸದಸ್ಯರಾದ ಶ್ರೀ ಅಬುಸಾಲಿ, ನಾರಾಯಣ ಏದಾರು, ಬಾಯಾರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಶ್ರೀ ಪ್ರಭಾಕರ ರೈ, ಮುಖ್ಯೋಪಾಧ್ಯಾಯರು , ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ಪಿಟಿಎ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ, ರಂಜಿತ್ ಕನಾಯಿ, ಪ್ರತಿಜ್ಞೆ ಬೋಧಿಸಿದರು. ಶಾಲಾ ಮುಖ್ಯದ್ವಾರ, ಬಸ್ಸು ತಂಗುದಾಣ, ಸಿಂಡಿಕೇಟ್ ಬ್ಯಾಂಕ್, ಕೃಷಿಭವನ, ಟೆಲಿಫೋನ್ ಎಕ್ಸ್ ಚೇಂಜ್, ಮೃಗಾಸ್ಪತ್ರೆ ದಾಟಿ ಲಾಲ್ ಬಾಗ್ ವರೆಗೆ ಸಾಗಿ ಪೈವಳಿಕೆ ಶಾಲಾ ಆವರಣದಲ್ಲಿ ಕೊನೆಯಾಯಿತು. ಪೈವಳಿಕೆಯ ಕ್ರೆಸೆಂಟ್ ಕ್ಲಬ್ ವತಿಯಿಂದ ಪಾನೀಯ ವ್ಯವಸ್ಥೆ ಮಾಡಲಾಯಿತು. ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

No comments:

Post a Comment