BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಕೊಯ್ಲು ಉತ್ಸವ ಅಧಿಕೃತ ಚಾಲನೆ ನೀಡಿದ ಶಾಲಾ ಮದ್ಯಾಹ್ನದೂಟ ಸಮಿತಿ



ಪೈವಳಿಕೆನಗರ, ಡಿ. 5 :ಶಾಲಾ ವಿದ್ಯಾರ್ಥಿಗಳಿಗೆ ಶುಚಿರುಚಿಯಾದ, ರೋಗಾಣುರಹಿತವಾದ, ಹಾನಿಕಾರಕವಲ್ಲದ, ಉತ್ತಮ ಪೋಷಕಾಂಶಭರಿತವಾದ ಮದ್ಯಾಹ್ನದೂಟ ವಿತರಿಸುವ ಯೋಜನೆಯ ಫಲವಾಗಿ ಶಾಲಾ ಮದ್ಯಾಹ್ನದೂಟ ಸಮಿತಿ, ಇಕೋ ಕ್ಲಬ್, ಆರೋಗ್ಯ ಕ್ಲಬ್ , ಸಂಯುಕ್ತವಾಗಿ ಚಾಲನೆ ನೀಡಿದ ಶಾಲಾ ತರಕಾರಿ ತೋಟದ ಮೊದಲ ಕೊಯ್ಲು ಉತ್ಸವವು ಪೈವಳಿಕೆನಗರ ಶಾಲಾ ತರಕಾರಿ ತೋಟದಲ್ಲಿ ಶುಕ್ರವಾರ ಪೂರ್ವಾಹ್ನ ಜರಗಿತು. ಹರಿವೆ ತೋಟದಿಂದ ಮೊದಲ ಕೊಯ್ಲು ಮದ್ಯಾಹ್ನದೂಟ ಸಂಚಾಲಕರಾದ ಶ್ರೀ ಸುನೀಶ್ ಮಾಸ್ಟರ್, ಪ್ರಶಾಂತ್ ಮಾಸ್ಟರ್, 6ಸಿ ತರಗತಿಯ ಶಾಕಿರ್ ಹಾಗೂ ಮಹೇಶ್ ನಡೆಸಿದರು. ಈ ಸಂದರ್ಭದಲ್ಲಿ ಶಾಲಾ ಮಧ್ಯಾಹ್ನದೂಟ ಸಮಿತಿ ಪದಾಧಿಕಾರಿಗಳು, ತೋಟದ ಮೇಲುಸ್ತುವಾರಿ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶುಕ್ರವಾರ ಮದ್ಯಾಹ್ನ ಬಿಸಿಯೂಟ ಹರಿವೆ ಮಿಶ್ರಿತ ಪದಾರ್ಥವನ್ನು ಫಲಾನುಭವಿಗಳು ಸವಿದರು.(ಪೈನಗರ್ ವಿಷನ್ ಕೃಷಿ ಲೋಕ ವರದಿ )


ಪೈವಳಿಕೆನಗರ ಶಾಲೆಯಲ್ಲಿ ಜೀವ ತಳೆದು ಪ್ರತ್ಯಕ್ಷವಾದ ಕಾಡು ಹುಲಿಗಳು

ಪೈವಳಿಕೆನಗರ, ಡಿ.4: ಹುಲಿ ಎಂದಾಕ್ಷಣ ಒಂದು ಕ್ಷಣ ಸಿಂಹವೂ ಗಡಗಡ ನಡುಗುವುದು. ಆದರೆ ಪೈವಳಿಕೆನಗರ ಶಾಲೆಯ 6ಸಿ ತರಗತಿಯ ಸ್ನೇಹಿತರು ಹುಲಿಯ ತಲೆಯನ್ನು ನಿರ್ಮಿಸುವ ಕಾರ್ಯಕ್ಕೆ ತೊಡಗಿದ್ದಾರೆ. ಯಾವಾಗಲೂ ನಿರ್ಮಾಣಾತ್ಮಕ ಕಾರ್ಯಗಳಲ್ಲಿ ತೊಡಗುವ ವರದರಾಜ್, ಸುದೀಪ್, ರೋಹಿತ್, ರಕ್ಷಣ್, ರೌಫ್, ಶಾಕಿರ್, ಲಕ್ಷ್ಮೀಶ ಹಾಗೂ ಮಹೇಶ್ ನುರಿತ ಕಲಾಗಾರರನ್ನೂ ನಾಚಿಸುವ ಕೈಂಕರ್ಯವನ್ನು ಆರಂಭಿಸಿದ್ದಾರೆ. ಶಾಲಾ ಆಟದ ಮೈದಾನದಲ್ಲಿರುವ ಮಣ್ಣನ್ನು ಉಪಯೋಗಿಸಿ ವಿವಿಧ ಮೂರ್ತಿಗಳನ್ನು ರಚಿಸಬಹುದೇ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡ ನಂತರ ಪ್ರಯೋಗವನ್ನು ಆರಂಭಿಸಿದರು. ಆದರೆ ಹೊಯಿಗೆ ಸೇರಿದುದರಿಂದ ಅದು ಫಲ ಕೊಡಲಿಲ್ಲ. ಸೋಲೇ ಗೆಲುವಿನ ಸೋಪಾನ ಎಂಬ ನಾಣ್ನುಡಿಯಂತೆ ಇವರು ಸೋಲಿಗೆ ಕಾರಣವನ್ನು ಹುಡುಕುವಾಗ ಎದುರಾಗಿದ್ದು ವಿಜಯದ ಮೆಟ್ಟಲು. ಸುಣ್ಣ ಮತ್ತು ಪ್ಲಾಸ್ಟರ್ ಆಫ್ ಪಾರಿಸ್ ಉಪಯೋಗಿಸಬಹುದೆಂದು ಹಿರಿಯರು ಸಲಹೆ ನೀಡಿದರು. ಛಲದ ಬೆನ್ನತ್ತಿ ಹೋದವರು ಸುಣ್ಣದಿಂದ ವಿವಿಧ ಪ್ರಾಣಿಗಳ ರುಂಡವನ್ನು ತಯಾರಿಸಿದರು. ಅದಕ್ಕೆ ವಾಟರ್ ಕಲರ್ ಕೊಟ್ಟು ಆಕರ್ಷಣೀಯವಾಗಿಸಿದರು. ತಮ್ಮ ಸೃಜನಾತ್ಮಕತೆಯ ಫಲವಾಗಿ ಮೂಡಿದ ವಸ್ತುಗಳನ್ನು ಶಾಲೆಗೆ ಸಮರ್ಪಿಸಿದ ಇವರ ಸನ್ಮನಸ್ಸು ಇತರರಿಗೆ ಆದರ್ಶಪ್ರಾಯವಾಗಿದೆ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಪಾಠದ ಸಮಯವನ್ನು ಹೊರತುಪಡಿಸಿ ಇವರು ಆಯ್ಕೆ ಮಾಡಿಕೊಂಡ ಹವ್ಯಾಸಕ್ಕೆ ಬೆಳಕಾದವರು ಮನೆಯವರು ಮತ್ತು ಶಿಕ್ಷಕರು. ವಿಷಯ ಅರಿತ ಪೈನಗರ್ ವಿಷನ್ ತಂಡ ರಿಯಾಲಿಟಿ ಚೆಕ್ ಗೆ ತೆರಳಿದಾಗ ಕೆಲವೇ ನಿಮಿಷಗಳಲ್ಲಿ ವರ್ಣರಂಜಿತವಾದ ಜೋಕರ್ ರುಂಡವನ್ನು ಮಣ್ಣಿನಿಂದ ತಯಾರಿಸಿ ಉತ್ತರಿಸಿದರು. ಶಾಲಾ ವಿಜ್ಞಾನ ಮೇಳಕ್ಕೆ ತಮ್ಮ ಎಲ್ಲಾ ರಚನೆಗಳನ್ನು ಸಮರ್ಪಿಸುವುದಾಗಿ ಪೈನಗರ್ ವಿಷನ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಈ ವಿಶೇಷ ಪ್ರತಿಭೆಗೆ, ಶಾಲೆಯ ಮೇಲಿರುವ ಅಭಿಮಾನಕ್ಕೆ, ಕಠಿಣ ಪರಿಶ್ರಮಕ್ಕೆ ಪೈನಗರ್ ವಿಷನ್ ನ ತುಂಬು ಹೃದಯದ ಅಬಿನಂದನೆಗಳು ಹಾಗೂ ಧನ್ಯವಾದಗಳು. ಶುಭ ಹಾರೈಕೆಗಳು.(ವರದಿ : ರಕ್ಷಣ್ ರೈ, 6ಸಿ, ಪೈನಗರ್ ವಿಷನ್ )


ಕಲಾ ರಸಿಕರ ಕುತೂಹಲ ತಣಿಸಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂಪನ್ನ

ಉಪ್ಪಳ, ಡಿ.3 : ನಾಡು, ನುಡಿ, ಸಾಹಿತ್ಯ, ಸಂಗೀತ,ಕಲಾ, ಧಾರ್ಮಿಕ, ಸಂಪ್ರದಾಯ, ಆಚಾರ, ವಿಚಾರಗಳ ಸೃಜನಾತ್ಮಕತೆಗೆ ಸಾಕ್ಷಿಯಾಗಿ ಈ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ತೆರೆ ಬಿದ್ದಿದೆ.ಉಪ್ಪಳ ಐಲ ಶಾರದಾ ಬೋವಿಸ್ ಹಾಗೂ ಅಯ್ಯೂರು ಜಮಾಯತ್ ಇಸ್ಲಾಮಿಕ್ ಶಾಲೆಯಲ್ಲಿ ನವೆಂಬರ್ 29ರಿಂದ ಆರಂಭಗೊಂಡ ಕಲೋತ್ಸವ ಡಿಸೆಂಬರ್ 3ರಂದು ಸಮಾರೋಪವಾಯಿತು. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಿಂದ ಸುಮಾರು 10ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಹಯರ್ ಸೆಕೆಂಡರಿ ಕಲೋತ್ಸವದಲ್ಲಿ ಪೈವಳಿಕೆನಗರ ದ್ವಿತೀಯ ಸ್ಥಾನಗಳಿಸಿತು. ಕನ್ನಡ ಕಲೋತ್ಸವದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದ ಕೀರ್ತಿ ಪೈವಳಿಕೆನಗರಕ್ಕೆ ಸ್ವಂತವಾಗಿದೆ. ಹೈಯರ್ ಸೆಕೆಂಡರಿ ಮತ್ತು ಹೈಸ್ಕೂಲ್ ವಿಭಾಗದ ಕನ್ನಡ ಕಲೋತ್ಸವದಲ್ಲಿ ಸಮಗ್ರ ಚಾಂಪಿಯನ್ ಶಿಪ್ ಗಳಿಸಿ, ಯುಪಿ ಕನ್ನಡ ಕಲೋತ್ಸವದಲ್ಲಿದ್ವಿತೀಯ ಸ್ಥಾನಗಳಿಸಿ ಕನ್ನಡ ಕಸ್ತೂರಿಯನ್ನು ಪೈವಳಿಕೆನಗರದಲ್ಲಿ ಹರಡಿಸಿದ ಹೆಮ್ಮೆ ನಮಗೆ. ಕಲೋತ್ಸವದ ಫಲಿತಾಂಶಗಳು ಅಧಿಕೃತ ಜಾಲತಾಣಗಳಲ್ಲಿ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಪೈವಳಿಕೆನಗರ ಶಾಲಾ ಬ್ಲೋಗ್ ಗಳಲ್ಲಿ ಪ್ರಕಟಿಸಿದ ಹಾಗೂ ವಿಶೇಷ ಸಂಚಿಕೆಯ ಮೂಲಕ ಮುದ್ರಿಸಿ ವಿತರಿಸಿದ ಹಿರಿಮೆ ಪೈನಗರ್ ವಿಷನ್ ಗೆ ಸಲ್ಲುವುದು. ಉಪಜಿಲ್ಲಾ ಕಲೋತ್ಸವದಲ್ಲಿ ಭಾಗವಹಿಸಿ ವಿಜಯಗೊಳಿಸಿದ ಕಲಾಕಾರರಿಗೆ, ಎಸ್ಕೋರ್ಟಿಂಗ್ ಅಧ್ಯಾಪಕರಿಗೆ, ತರಬೇತಿ ನೀಡಿದ ಗುರುವೃಂದದವರಿಗೆ, ಸಕಾಲದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಲು ಸಹಾಯ ಮಾಡಿದ ಆಪದ್ಭಾಂಧವರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಉತ್ಸವ ಸಮಿತಿ ಸಂಚಾಲಕರಾದ ಶ್ರೀ ಶ್ರೀಧರ ಮಾಸ್ಟರ್ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.(ಪೈನಗರ್ ವಿಷನ್ ಕಲೋತ್ಸವ ಲೋಕ ವರದಿ)

No comments:

Post a Comment