ಸಾಹಿತ್ಯಾಸಕ್ತಿ
ವರ್ತನೆಯನ್ನು ಉತ್ತಮಗೊಳಿಸುತ್ತದೆ-ಸಾಯಿಭದ್ರ
ರೈ
ಪೈವಳಿಕೆನಗರ:
ಸಾಹಿತ್ಯಾಸಕ್ತಿ
ನಮ್ಮ ವರ್ತನೆಯನ್ನು ಉತ್ತಮಗೊಳಿಸುತ್ತದೆ.
ಮೊಬೈಲನ್ನು
ಬದಿಗಿಟ್ಟು ಓದುವ,
ಬರೆಯುವ
ಹಾಗೂ ಚಿತ್ರರಚಿಸುವ ಉತ್ತಮ
ಹವ್ಯಾಸಗಳನ್ನು ನಾವು ಬೆಳೆಸಿಕೊಳ್ಳಬೇಕು.
ಪ್ರತಿಧ್ವನಿಯು
ಇದಕ್ಕೆ ತಕ್ಕ ವೇದಿಕೆಯಾಗಿದೆ
ಎಂದು ಪತ್ರಕರ್ತೆ ಸಾಯಿಭದ್ರ ರೈ
ಶಿರಿಯ ಅಭಿಪ್ರಾಯಪಟ್ಟರು.
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಯುಪಿ ವಿಭಾಗದ ಕನ್ನಡ ಮುದ್ರಿತ
ಮಾಸಪತ್ರಿಕೆ ‘ಪ್ರತಿಧ್ವನಿ’
ಬಿಡುಗಡೆಗೊಳಿಸಿ ಅವರು
ಮಾತನಾಡುತ್ತಿದ್ದರು.
ಶಾಲಾ
ಮುಖ್ಯ ಶಿಕ್ಷಕ ಇಬ್ರಾಹೀಂ ಬುಡ್ರಿಯ
ಅಧ್ಯಕ್ಷತೆ ವಹಿಸಿದ್ದರು.
ಹಿರಿಯ
ಶಿಕ್ಷಕ ರವೀಂದ್ರನಾಥ್ ಕೆ ಆರ್
ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುಪಿ
ಎಸ್ ಆರ್ ಜಿ ಸಂಚಾಲಕಿ ಸುಮಿತ್ರ
ಕೆ ಶುಭಾಶಂಸನೆಗೈದರು.
ಸಮಾರಂಭದಲ್ಲಿ
ಎಲ್ ಎಸ್ ಎಸ್ ವಿಜೇತೆ ಅಶ್ವಿನಿ,
ಆಯಿಷತ್
ಮುನೀಬ ಹಾಗೂ ಯು ಎಸ್ ಎಸ್ ವಿಜೇತೆ
ನಿಧಿ ಎ ಶೆಟ್ಟಿಗಾರ್ ಅವರನ್ನು
ಶಾಲು ಹೊದೆಸಿ ಸ್ಮರಣಿಕೆ ನೀಡಿ
ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯರಾಗಿ
ಭಡ್ತಿ ಹೊಂದಿದ ಶಂಕರನಾರಾಯಣ ಭಟ್
ಬೀಡುಬೈಲು ವಿಜೇತರಿಗೆ ಬಹುಮಾನ
ವಿತರಿಸಿದರು.
ಶಿವಾನಿ
ಸ್ವಾಗತಿಸಿ ಧನ್ಯಶ್ರೀ ವಂದಿಸಿದರು.
ಪ್ರಜೇಶ್
ನಿರೂಪಿಸಿದರು.
ಮುಖ್ಯ
ಸಂಪಾದಕ ಪ್ರವೀಣ್ ಕನಿಯಾಲ ನೇತೃತ್ವ
ನೀಡಿದರು.
No comments:
Post a Comment