ನಿಯಮಿತ
ಪರಿಶ್ರಮದಿಂದ ಗೆಲುವು ಸಾಧ್ಯ
– ಧ್ವಾನಿಶ್
ಪೈವಳಿಕೆನಗರ,
ಮೇ.3:
ನಿಯಮಿತವಾದ
ಪರಿಶ್ರಮದಿಂದಲೇ ಗೆಲುವು ಸಾಧಿಸಲು
ಸಾಧ್ಯ ಎಂದು ಪೈನಗರ್ ವಿಷನ್
ಪ್ರತಿನಿಧಿ ಧ್ವಾನಿಶ್ ಅಭಿಪ್ರಾಯಪಟ್ಟರು.
ಈ
ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್
ಗ್ರೇಡ್ ಪಡೆದ ನಂತರ ಅವರು ಪೈನಗರ್
ವಿಷನ್ ನೊಂದಿಗೆ ಸಂತಸವನ್ನು
ಹಂಚಿಕೊಂಡರು.
1ರಿಂದ
ನಾಲ್ಕನೇ ತರಗತಿವರೆಗೆ ಕಾಯರ್
ಕಟ್ಟೆ ಎಲ್ ಪಿ ಶಾಲೆಯಲ್ಲಿ ವ್ಯಾಸಂಗ
ಮಾಡಿದ ಧ್ವಾನಿಶ್ 5ನೇ
ತರಗತಿಗೆ ಪೈವಳಿಕೆನಗರಕ್ಕೆ
ಸೇರ್ಪಡೆಗೊಂಡರು.
ಸತತ
ಕ್ವಿಝ್,
ಕಲೋತ್ಸವ,
ವಿಜ್ಞಾನಮೇಳದಲ್ಲಿ
ತನ್ನ ಪ್ರತಿಭೆ ಪ್ರದರ್ಶಿಸಿದ
ಧ್ವಾನಿಶ್ 7ನೇ
ತರಗತಿಯಲ್ಲಿ ವಿದ್ಯಾರಂಗದ ಕನ್ನಡ
ಕವಿತಾ ರಚನೆಯಲ್ಲಿ ಅಜೇಯನಾಗಿ
ಗಡಿನಾಡ ಕನ್ನಡ ಮಕ್ಕಳ ಕಣ್ಮಣಿಯಾದರು.
ಹೈಸ್ಕೂಲ್
ವಿಭಾಗದ ವಿಜ್ಞಾನ ಮೇಳದಲ್ಲಿ
ಸತತವಾಗಿ ಜಿಲ್ಲಾ ಮಟ್ಟದಲ್ಲಿ
ಸ್ಪರ್ಧಿಸಿ ಪ್ರಶಸ್ತಿಗಳಿಸಿದ
ಧ್ವಾನಿಶ್ ಶಾಲೆಯ ನಿಯಮಗಳನ್ನು
ಒಮ್ಮೆಯೂ ಮೀರಿದ್ದು ಇಲ್ಲ.
ತನ್ನ
ಗೆಲುವಿನ ಹಿಂದೆ ಅವಿರತವಾಗಿ
ಶ್ರಮಿಸಿದ ತಂದೆ,
ತಾಯಿ,
ಗುರುಗಳು
ಸಹಪಾಠಿಗಳಿಗೆ ಕತಜ್ಞತೆಗಳನ್ನು
ಸಲ್ಲಿಸುವ ಧ್ವಾನಿಶ್ ಮುಂದೆ
ವಿಜ್ಞಾನ ವಿಭಾಗದಲ್ಲಿ ಶಿಕ್ಷಣ
ಮುಂದುವರೆಸುವ ಆಸಕ್ತಿ ಹೊಂದಿರುವ
ಸಜ್ಜನ ವ್ಯಕ್ತಿತ್ವ.
ಪೈನಗರ್
ವಿಷನ್ ಪ್ರತಿನಿಧಿಯಾದ ಧ್ವಾನಿಶ್
ನ ಸಾಧನೆಗೆ ತುಂಬು ಹೃದಯದ
ಅಭಿನಂದನೆಗಳು.
ಸಮಯದ
ಸದ್ಬಳಕೆ,
ಶ್ರದ್ಧೆಯಿಂದ
ಗೆಲುವು ಸಾಧ್ಯ -ಕಾರ್ತಿಕ್
ಪೈವಳಿಕೆನಗರ,
ಮೇ.3:
ಸಮಯದ
ಸದ್ಬಳಕೆ,
ಕಲಿಕೆಯ
ಕಡೆಗಿರುವ ಶ್ರದ್ಧೆ,
ಚಿಕ್ಕ
ಚಿಕ್ಕ ತ್ಯಾಗಗಳು ಗೆಲುವಿನ
ದಾರಿಯನ್ನು ತೋರುತ್ತವೆ.
ತನ್ನ
ಗೆಲುವಿಗೆ ಚೈತನ್ಯ ನೀಡಿದ ರಕ್ಷಕರು
ಶಿಕ್ಷಕರು ಮತ್ತು ಸಹಪಾಠಿಗಳಿಗೆ
ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು
ಸಲ್ಲಿಸುತ್ತೇನೆ.
ಸಾಧನೆಯಿಂದ
ಜೀವನದಲ್ಲಿ ಮೇಲಕ್ಕೇರಲು ಸಾಧ್ಯ.
ಪ್ರತಿ
ತಪ್ಪುಗಳು ನಮಗೆ ವಿಜಯದ ಹಾದಿಯನ್ನು
ತೋರುತ್ತದೆ.
ಮಾಡಿದ
ತಪ್ಪುಗಳನ್ನು ತಿದ್ದಿದ ಎಲ್ಲರಿಗೂ
ನಾನು ಚಿರಋಣಿಯಾಗಿದ್ದೇನೆ ಎಂದು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್
ಪಡೆದಿರುವ ಪೈನಗರ್ ವಿಷನ್ ಪ್ರತಿನಿಧಿ
ಕಾರ್ತಿಕ್ ಪೈನಗರ್ ವಿಷನ್ ಗೆ
ತಿಳಿಸಿದ್ದಾರೆ.
ಒಂದನೇ
ತರಗತಿಯಿಂದಲೇ ಪೈವಳಿಕೆನಗರದಲ್ಲಿ
ತನ್ನ ಶಿಕ್ಷಣವನ್ನು ಆರಂಭಿಸಿದ
ಕಾರ್ತಿಕ್ ನೇರ ನಡೆನುಡಿಯ ಸರಳ
ಸಜ್ಜನ ವ್ಯಕ್ತಿ.
ಕನ್ನಡ
ನಾಡು ನುಡಿ ಸಂಸ್ಕೃತಿಯ ಬಗ್ಗೆ
ಅಪಾರ ಕಾಳಜಿ ಹೊಂದಿರುವ ಕಾರ್ತಿಕ್
ಈ ಬಾರಿ ಕೇರಳ ರಾಜ್ಯ ಕಲೋತ್ಸವದಲ್ಲಿ
ಕನ್ನಡ ಕವಿತಾ ರಚನೆಯಲ್ಲಿ ಎ
ಗ್ರೇಡ್ ಪಡೆದಿರುವುದು ಸಮಸ್ತ
ಗಡಿನಾಡ ಕನ್ನಡಿಗರಿಗೇ ಹೆಮ್ಮೆಯ
ವಿಷಯವಾಗಿದೆ.
ಕಾರ್ತಿಕ್
ನ ಸಾಧನೆಗೆ ತುಂಬು ಹೃದಯದ
ಅಭಿನಂದನೆಗಳು.
No comments:
Post a Comment