BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕೇರಳ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 5ರಂದು


ತಿರುವನಂತಪುರ,ಮೇ4: ಈ ಅಧ್ಯಯನ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 5ರಂದು ಪ್ರಕಟವಾಗಲಿದೆ. ಗುರುವಾರ ಫಲಿತಾಂಶ ಅಂಗೀಕರಿಸುವುದಕ್ಕಾಗಿ ಪರೀಕ್ಷಾ ಮಂಡಳಿ ಸಭೆ ಸೇರಲಿದೆ. ಶುಕ್ರವಾರ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸುವರು. ಸುಮಾರು 2 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಧಿಕೃತ ಫಲಿತಾಂಶ ಘೋಷಣೆಯಾದ ಕೂಡಲೇ ವಿವಿಧ ವೆಬ್ ಸೈಟ್ ಗಳಲ್ಲಿ ತಿಳಿಯಲು ಸಾಧ್ಯವಿದೆ. www.results.itschool.gov.in ಎಂಬ ಸೈಟಿನಲ್ಲಿ ಅಧಿಕೃತ ವಿವರವಾದ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಇದಕ್ಕೆ ಹೊರತಾಗಿ ಸಫಲಂ 2017 ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಿತಾಂಶ ಲಭ್ಯವಿರುತ್ತದೆ. ಇದಕ್ಕಾಗಿ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಬೇಕಾಗುವುದು. ಮೇ 8ರಿಂದ 22ರವರೆಗೆ ಪ್ಲಸ್ ವನ್ ಕೋರ್ಸಿಗೆ ಆನ್ ಲೈನಾಗಿ ಅರ್ಜಿ ಸಲ್ಲಿಸಬಹುದು. ಮೇ 29ಕ್ಕೆ ಟ್ರಯಲ್ ಎಲೋಟ್ ಮೆಂಟ್, ಜೂನ್ ಐದಕ್ಕೆ ಮೊದಲ ಎಲೋಟ್ ಮೆಂಟ್, ಜೂನ್ 14ರಿಂದ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಪೈವಳಿಕೆನಗರ ಶಾಲೆಯ ಎಸ್ ಎಸ್ ಎಲ್ ಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಕನ್ನಡದಲ್ಲಿ ಮಾಹಿತಿ ಲಭಿಸಲು ಪೈನಗರ್ ವಿಷನ್ ವತಿಯಿಂದ 24 ಗಂಟೆ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ, ಪ್ರಮಾಣಪತ್ರ, ಪ್ಲಸ್ ವನ್ ಪ್ರವೇಶ ಬಗ್ಗೆ ತಿಳಿಯಲು 8606738227 (ಪೈನಗರ್ ವಿಷನ್) ಎಂಬ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಫಲಿತಾಂಶ ಸೈಟುಗಳ ಲಿಂಕುಗಳು ಪೈವಳಿಕೆನಗರದ ಬ್ಲಾಗಿನಲ್ಲಿ ಲಭ್ಯವಿರುವುದು.(ಪೈನಗರ್ ವಿಷನ್, ಪೈವಳಿಕೆನಗರ)




കേരള എസ് എസ് എൽ സി പരീക്ഷാ ഫലം മേയ് 5ന്

തിരുവനന്തപുരം: ഈ അധ്യയന വർഷത്തെ എസ് എസ് എൽ സി പരീക്ഷാ ഫലം മേയ് 5ന് പ്രസിദ്ധീകരിക്കും. ഉച്ചയ്ക്ക് 2 മണിയോടെ വിദ്യഭ്യാസ മന്ത്രിയാണ് ഫലം പ്രഖ്യാപിക്കുക. ഔദ്യോഗിക ഫല പ്രഖ്യപന നടന്നാലുടന് www.results.itschool.gov.in എന്ന ലിങ്ക് വഴി ഫലമറിയാം. പ്ളേ സ്റോറിൽ സഫലം 2017 എന്ന അപ്ളികേഷന് ലഭ്യമാണ്. മേയ് 8 മുതൽ 22 വരെ പ്ളസ് വൺ അപേക്ഷിക്കാം. മേയ് 29ന് ട്രയൽ അലോറ്റ് മെൻറ്, ജൂൺ 5ന് ആദ്യഘട്ട അലോറ്റ്മെൻറ്, ജൂൺ 14 ന് ക്ളാസുകൾ തുടങ്ങും. എസ് എസ് എൽ സി പരീക്ഷാ ഫലം അറിയുന്ന ലിങ്കുകൾ പൈവളികെനഗർ സ്കൂൾ ബ്ളോഗിൽ ലഭ്യമാണ്.

No comments:

Post a Comment