ಪೈವಳಿಕೆನಗರ
ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ
ಸಂರಕ್ಷಣ ಯಜ್ಞ ಉದ್ಘಾಟನೆ
ಪೈವಳಿಕೆನಗರ,ಜ.27: ಕೇರಳ ಸರಕಾರದ ನೂತನ ಯೋಜನೆ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಶಾಲಾ ಮಟ್ಟದ ಉದ್ಘಾಟನೆ ಶುಕ್ರವಾರ ನಡೆಯಿತು. ಪೂರ್ವಾಹ್ನ 10 ಗಂಟೆಗೆ ಕರೆದ ವಿಶೇಷ ಅಸೆಂಬ್ಲಿಯಲ್ಲಿ ಶ್ರೀ ರವೀಂದ್ರನಾಥ್ ಕೆ ಆರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗ್ರೀನ್ ಪ್ರೊಟೋಕೋಲ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಶಾಲಾ ವಠಾರವನ್ನು ಹಸಿರನ್ನಾಗಿಸುವ ಪ್ರತಿಜ್ಞೆಗೈಯಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಪಿ, ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ, ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ನೇತೃತ್ವ ನೀಡಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಪಿಟಿಎ ಪದಾಧಿಕಾರಿಗಳು, ಕ್ಲಬ್ ಪದಾಧಿಕಾರಿಗಳು, ಅಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ವ್ಯಾಪಾರಿ ವ್ಯವಸಾಯಿ ಸಮಿತಿ ನೇತಾರರು, ವಿದ್ಯಾಭಿಮಾನಿಗಳು, ರಾಜಕೀಯ ನೇತಾರರು, ಊರವರು ಭಾಗವಹಿಸಿದ್ದರು. ಆಹಾರವನ್ನು ಹಾಳು ಮಾಡಬಾರದು, ನಮಗೆ ಬೇಕಾದಷ್ಟು ಮಾತ್ರ ಬೇಯಿಸಬೇಕು, ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಪದಾರ್ಥವನ್ನು ಉಪಯೋಗಿಸಬಾರದು. ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳನ್ನು ಮಾತ್ರ ಬಳಸಬೇಕು.ಪ್ಲಾಸ್ಟಿಕ್ ಪೆನ್ನುಗಳಿಗಿಂತ ಇಂಕ್ ಪೆನ್ನುಗಳನ್ನು ಬಳಸಬೇಕು,ಉಪಯೋಗಿಸಿ ಬಿಸಾಡುವ ಉತ್ಪನ್ನಗಳ ಉಪಯೋಗವನ್ನು ನಿಯಂತ್ರಿಸಬೇಕು. ಜೈವಿಕ ಮತ್ತು ಅಜೈವಿಕ ಮಾಲಿನ್ಯಗಳನ್ನು ಬೇರ್ಪಡಿಸಬೇಕು. ಶಾಲೆಗಳಲ್ಲಿ ಕಂಪೋಸ್ಟ್ ಹೊಂಡಗಳನ್ನು ಸ್ಥಾಪಿಸಬೇಕು. ಪ್ಲಾಸ್ಟಿಕ್ ಶುದ್ಧಿಕರಿಸಿ ಪುನ ನಿರ್ಮಾಣಕ್ಕೆ ಬಳಸಬೇಕು. ಇಲೆಕ್ಟ್ರೋನಿಕ್ ವಸ್ತುಗಳನ್ನು ಶೇಖರಿಸಿಡಬೇಕು ಎಂಬುದು ಗ್ರೀನ್ ಪ್ರೋಟೋಕೋಲ್ ನಲ್ಲಿರುವ ಕೆಲವು ಅಂಶಗಳಾಗಿವೆ. ಪೈವಳಿಕೆನಗರ ಶಾಲೆಯು ಮಾಲಿನ್ಯ ಮುಕ್ತ ಕ್ಯಾಂಪಸ್ ಆಗಲು ಎಲ್ಲರೂ ಸಹಕರಿಸಬೇಕೆಂದು ಪೈನಗರ್ ವಿಷನ್ ವಿನಂತಿಸುವುದು(ಫಾತಿಮತ್ ಸಹನ 9ಎ, ಕಾರ್ತಿಕ್ ಕೆ 9ಸಿ, ಸಾತ್ವಿಕ್ ಎನ್ 7ಎಚರಣ್ ರಾಜ್ ಎಸ್ 9ಸಿ, ಧ್ವಾನಿಷ್ 9ಸಿ,ವೈಷ್ಣವ್ 8ಸಿ, )
No comments:
Post a Comment