ಪೈವಳಿಕೆನಗರ
ಶಾಲೆಯಲ್ಲಿ ವಾಚನ ವಾರಾಚರಣೆ
ಪೈವಳಿಕೆನಗರ,
ಜೂ.20:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ವಾಚನ ವಾರಾಚರಣೆಯನ್ನು ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲ ಪಿ ಉದ್ಘಾಟಿಸಿದರು.
ಶಾಲಾ
ಸಭಾಂಗಣದಲ್ಲಿ ಅಪರಾಹ್ನ ನಡೆದ
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ
ಶ್ರೀ ರವೀಂದ್ರನಾಥ್ ಕೆ.ಆರ್.
ಅಧ್ಯಕ್ಷತೆ
ವಹಿಸಿದ್ದರು.
ಕನ್ನಡ
ಸಂಘದ ಸಂಚಾಲಕರಾದ ಶ್ರೀಮತಿ ರೈನಾ
ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರಂಗದ
ಸಂಚಾಲಕ ಶ್ರೀ ಪ್ರವೀಣ್ ಕನಿಯಾಲ,
ಶಾಲಾ
ಆಚರಣಾ ಸಮಿತಿ ಸಂಚಾಲಕರಾದ ಶ್ರೀ
ರಾಧಾಕೃಷ್ಣನ್,
ಕನ್ನಡ
ವಿಭಾಗದ ಶ್ರೀಮತಿ ಶಶಿಕಲಾ.ಕೆ,
ಶುಭಾಶಂಸನೆಗೈದರು.
ಧ್ವಾನಿಷ್
ಸ್ವಾಗತಿಸಿ,
ಕುಮಾರಿ
ಅನು ವಂದಿಸಿದರು.
ಕಾರ್ತಿಕ್.ಕೆ
ನಿರೂಪಿಸಿದರು.
ವಾರಾಚರಣೆಯ
ಅಂಗವಾಗಿ ವಿದ್ಯಾರ್ಥಿಗಳು ರಚಿಸಿದ
ಪೋಸ್ಟರ್ ಗಳನ್ನು ಪ್ರದರ್ಶಿಸಲಾಯಿತು.
8ಸಿ
ತರಗತಿಯಲ್ಲಿ ಪುಸ್ತಕ ಪ್ರದರ್ಶನ
ಜರಗಿತು.
ರಮ್ಯ,
ಪ್ರಣೀತಾ,
ಅಕ್ಷತಾ
ಪ್ರಾರ್ಥನೆ ಹಾಡಿದರು.
No comments:
Post a Comment