ಕರಾಟೆ
ಸಮಾರೋಪದಲ್ಲಿ ವಿದ್ಯಾರ್ಥಿನಿಯರು
ಉಪ್ಪಳ,
ಫೆ.10
: ಮಂಜೇಶ್ವರದ
ಬ್ಲೋಕ್ ಸಂಪನ್ಮೂಲ ಕೇಂದ್ರದ
ಹುಡುಗಿಯ ಶಿಕ್ಷಣದ ಪ್ರಯುಕ್ತ
ಹೆಣ್ಣು ಮಕ್ಕಳಿಗಾಗಿ ಆತ್ಮರಕ್ಷಣಾ
ಕಲೆ ಕರಾಟೆ ತರಬೇತಿಯ ಸಮಾರೋಪ
ಸಮಾರಂಭ ಬುಧವಾರ ಮಂಜೇಶ್ವರ ಬ್ಲೋಕ್
ಯೋಜನಾಧಿಕಾರಿಯವರ ಕಛೇರಿಯಲ್ಲಿ
ನಡೆಯಿತು.
ನಂತರ
ನಡೆದ ಪ್ರತಿಭಾ ಪ್ರದರ್ಶನದಲ್ಲಿ
ಪೈವಳಿಕೆನಗರ ಶಾಲೆಯ ಪ್ರಜ್ಞಾ
ಆರ್ 8ಡಿ,
ವೈಭವಿ
8ಸಿ,
ಪವಿತಾ
8ಎ,
ಶುಹೈಮಾ
8ಎ
ಸೇರಿದಂತೆ 13
ಕರಾಟೆ
ವಿದ್ಯಾರ್ಥಿನಿಯರು ಭಾಗವಹಿಸಿದರು.
ಹಂಚು
ಒಡೆಯುವ ದೃಶ್ಯ ನೋಡುಗರಲ್ಲಿ
ಭಯವನ್ನು ಸೃಷ್ಟಿಸುವಂತಾಯಿತು.
ಜಿಲ್ಲಾ
ಯೋಜನಾಧಿಕಾರಿ ಶ್ರೀ ಇಬ್ರಾಹೀಂ
ಪ್ರಮಾಣಪತ್ರ ವಿತರಿಸಿದರು.
ಬಿಪಿಒ
ಶ್ರೀ ವಿಜಯಕುಮಾರ್,
ಜಿಲ್ಲಾ
ವಿದ್ಯಾಭ್ಯಾಸ ತರಬೇತಿ ಸಂಸ್ಥೆಯ
ಮುಖ್ಯಸ್ಥರಾದ ಶ್ರೀ ನಾರಾಯಣ
ದೇಲಂಪಾಡಿ,
ಕರಾಟೆ
ಗುರು ಶ್ರೀ ಪ್ರಮೋದ್ ಉಪಸ್ಥಿತರಿದ್ದರು.
No comments:
Post a Comment