ಮುಖ್ಯೋಪಾಧ್ಯಾಯಿನಿಯಾಗಿ
ಭಡ್ತಿಯಾದ ಶ್ರೀಮತಿ ವಾರಿಜಾ
ನೇರೋಳು
ಪೈವಳಿಕೆನಗರ,
ಜ.7:
ಮುಖ್ಯೋಪಾಧ್ಯಾಯಿನಿಯಾಗಿ
ಭಡ್ತಿಗೊಂಡ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕಿ
ಶ್ರೀಮತಿ ವಾರಿಜಾ ನೇರೋಳು ಅವರನ್ನು
ಪೈವಳಿಕೆನಗರ ಶಾಲಾ ಉದ್ಯಾಗಿಗಳ
ಸಂಘದ ವತಿಯಿಂದ ಬೀಳ್ಕೊಡಲಾಯಿತು.
ಮುಖ್ಯೋಪಾಧ್ಯಾಯರಾದ
ಶ್ರೀಮತಿ ಶ್ಯಾಮಲಾ ಅಧ್ಯಕ್ಷತೆ
ವಹಿಸಿದ್ದರು.
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಮುಖ್ಯ ಅತಿಥಿಯಾಗಿದ್ದರು.
1997ರಲ್ಲಿ
ಪಾಂಡಿ ಶಾಲೆಯಲ್ಲಿ ವೃತ್ತಿ
ಜೀವನಕ್ಕೆ ಕಾಲಿಟ್ಟ ಟೀಚರ್
2000ದಲ್ಲಿ
ಬೆಳ್ಳೂರು ಶಾಲೆಗೆ ವರ್ಗಾವಣೆಗೊಂಡರು.
2002ರಲ್ಲಿ
ಕಾಯರ್ ಕಟ್ಟೆ ಶಾಲೆಗೆ ವರ್ಗಾವಣೆಯಾದ
ಟೀಚರ್ 2013ರಿಂದ
ಪೆರಡಾಲ ಶಾಲೆಯಲ್ಲಿ ಕರ್ತವ್ಯ
ನಿರ್ವಹಿಸಿದರು.
2015ರಲ್ಲಿ
ಪೈವಳಿಕೆನಗರ ಶಾಲೆಗೆ ವರ್ಗಾವಣೆಗೊಂಡ
ವಾರಿಜಾ ಟೀಚರ್ ಇದೀಗ ಬೆಳ್ಳೂರು
ಹಯರ್ ಸೆಕೆಂಡರಿ ಶಾಲೆಯಲ್ಲಿ
ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡಿದ್ದಾರೆ.
ಸೌಮ್ಯ
ಸ್ವಭಾವದ ವಾರಿಜಾ ಟೀಚರ್ ಎಲ್ಲರಲ್ಲೂ
ಹೊಂದಿಕೊಳ್ಳುವ ಸ್ವಭಾವದೊಂದಿಗೆ
ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದಾರೆ.
ಹಿರಿಯ,
ಕಿರಿಯರೊಂದಿಗೆ
ಗೌರವಪೂರ್ವಕವಾಗಿ ಬೆರೆಯುವ
ಟೀಚರ್ ವಿದ್ಯಾರ್ಥಿಗಳ
ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ
ಶ್ರಮಿಸಿದ್ದಾರೆ.
ಕೃಷ್ಣಮೂರ್ತಿ
ಎಂ.ಎಸ್.,
ರವೀಂದ್ರನಾಥ.ಕೆ.ಆರ್,
ಕುಮಾರಿ
ವತ್ಸಲಾ,
ರಜಿತಾ
ಮಂಗಳೂರು,
ಅಬ್ದುಲ್
ಲತೀಫ್ ಕೊಕ್ಕೆಚಾಲ್ ಮಾತನಾಡಿದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ,
ಉದ್ಯೋಗಿಗಳ
ಸಂಘದ ಕಾರ್ಯದರ್ಶಿ ಶ್ರೀಮತಿ
ಶಶಿಕಲಾ ವಂದಿಸಿದರು.

No comments:
Post a Comment