BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ವಿದ್ಯಾರಂಗ ಮಂಜೇಶ್ವರ ಉಪಜಿಲ್ಲಾ ಸಾಹಿತ್ಯೋತ್ಸವ 2016

ಪೈವಳಿಕೆನಗರ, .19: ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ಕಾರ್ಯಕ್ರಮ ಜನವರಿ 19 ಮಂಗಳವಾರ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಪೂರ್ವಾಹ್ನ 9 ಗಂಟೆಯಿಂದ ನೋಂದಾವಣೆ ಆರಂಭವಾಗಲಿದೆ. 9.30 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಂಶುಪಾಲರಾದ ಪ್ರೋ. ಪಿ.ಎನ್, ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಜೇಶ್ವರ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜನಪ್ರತಿನಿಧಿಗಳಾದ ಶ್ರೀ ಹರ್ಷಾದ್ ವರ್ಕಾಡಿ, ಶ್ರೀಮತಿ ಮಮತಾ ದಿವಾಕರ್, ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ, ಫಾತಿಮತ್ ಝೌರಾ, ಯೋಜನಾಧಿಕಾರಿ ಶ್ರೀ ಶ್ರೀನಿವಾಸ.ಕೆ, ಜಿಲ್ಲಾ ವಿದ್ಯಾಧಿಕಾರಿ ಶ್ರೀ ವೇಣುಗೋಪಾಲನ್, ಶ್ರೀ ಡಾ. ಬಾಲನ್, ಶ್ರೀ ಇಬ್ರಾಹಿಂ.ಬಿ, ಶ್ರೀ ವಿಜಯಕುಮಾರ್. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ ಡಿಸೋಜಾ ಶುಭಾಶಂಸನೆಗೈಯುವರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ಯಾಮಲಾ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕರಾದ ಶ್ರೀಮತಿ ಶಶಿಕಲಾ ಕೆ ಧನ್ಯವಾದ ಸಲ್ಲಿಸಲಿದ್ದಾರೆ.ಎಲ್ ಪಿ ವಿಭಾಗದಲ್ಲಿ ಕಥಾರಚನೆ, ಕವಿತಾ ರಚನೆ, ಜನಪದ ಗೀತೆ, ಚಿತ್ರ ರಚನೆ, ಯುಪಿ ವಿಭಾಗದಲ್ಲಿ ಕಥಾರಚನೆ, ಕವಿತಾ ರಚನೆ, ಜನಪದ ಗೀತೆ, ಚಿತ್ರ ರಚನೆ, ಪುಸ್ತಕಾಸ್ವಾದನೆ, ಹೈಸ್ಕೂಲ್ ವಿಭಾಗದಲ್ಲಿ ಕಥಾರಚನೆ, ಕವಿತಾ ರಚನೆ, ಜನಪದ ಗೀತೆ, ಚಿತ್ರ ರಚನೆ, ಪುಸ್ತಕಾಸ್ವಾದನೆ, ಚಿತ್ರ ಕಥಾ ರಚನೆ ಕಮ್ಮಟಗಳಿದ್ದು ವಿವಿಧ ವೇದಿಕೆಗಳಲ್ಲಾಗಿ ನಡೆಯಲಿದೆ. ಎಲ್ ಪಿ ವಿಭಾಗದಲ್ಲಿ ಪ್ರತಿ ಪಂಚಾಯತಿನಿಂದ ಪ್ರತಿ ಸ್ಪರ್ಧೆಗೆ ಇಬ್ಬರು ಭಾಗವಹಿಸಬಹುದಾಗಿದೆ. ಯುಪಿ ವಿಭಾಗ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಪ್ರತಿ ಶಾಲೆಯಿಂದ ಪ್ರತಿ ಸ್ಪರ್ಧೆಗೆ ಇಬ್ಬರು ಭಾಗವಹಿಸಬಹುದಾಗಿದೆ. ಪ್ರತಿ ಸ್ಪರ್ಧೆಯಿಂದ ಇಬ್ಬರನ್ನು ಆಯ್ಕೆ ಮಾಡಲಾಗುವುದು. ಜನವರಿ 23 ಮತ್ತು 24 ರಂದು ಕಾಞಂಗಾಡ್ ಸೌತ್ ಶಾಲೆಯಲ್ಲಿ ನಡೆಯುವ ಕಾಸರಗೋಡು ಜಿಲ್ಲಾ ಮಟ್ಟದ ವಸತಿ ಶಿಬಿರದಲ್ಲಿ ಮಂಜೇಶ್ವರ ಉಪಜಿಲ್ಲೆಯನ್ನು ಪ್ರತಿನಿಧಿಸಿ ಭಾಗವಹಿಸುವರು. ಸಂಘಟನಾ ಸಮಿತಿ ಪದಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರವನ್ನು ಬಯಸಿದ್ದಾರೆ
പൈവളിഗെനഗർ, ജ.15: മഞ്ചേശ്വര ഉപജില്ലാ തലത്തിൻറെ വിദ്യരംഗ സാഹിത്യത്സവം 2016 പൈവളിഗെനഗര് ഹയർ സെകൻ്റരി സ്കൂളില് ജനുവരി 19 ചൊവ്വാള്ച്ച നടക്കും. രാവിലെ 9 മുതല് രജിസ്റേഷണ്. 9.30ൻ മഞ്ചേശ്വരം ബ്ളോക് പഞ്ചായത്ത് അധ്യക്ഷൻ ശ്രീ എ.കെ.എം അശ്രഫ് ഉദ്ഘാടനം ചെയ്യും. പൈവളിഗെ ഗ്രാമ പഞ്ചായത്ത് പ്രസിഡൻറ് ശ്രീമതി ഭാരതി ഷെട്ടി അധ്യക്ഷത വഹിക്കും. ജനപ്രതിനിധികളായ ശ്രീ ഹര്ഷാദ് വോര്കാഡി, മമതാ ദിവാകര്, സുനിതാ വാല്ടി ജിസുസാ, ഫാതിമത് സൌരാ,ശ്രീനിവാസ. കെ, വേണുഗോപാലന്, ബാലന്, ഇബ്രാഹിം. വിജയകുമാര്, ലാരെന്സ് ഡിസുസ ആശാംസകള് അര്പിക്കും. എഇഒ നന്ദികേശൻ സംസാരിക്കും. രിടയര്ഡ് പ്രിന്സിപ്പാള് പി എന് മൂടിത്തായ മുഖ്യ അതിഥിയായിരിക്കും. ഹെഡ് മാസ്റർ ശ്രീമതി ശ്യാമലാ പി സ്വഗതവും, വിദ്യാരംഗം മഞ്ചേശ്വര ഉപജില്ലാ കന്വിനർ ശ്രീമതി ശശികലാ കെ നന്ദി പരയും.  

No comments:

Post a Comment