BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಸಂಭ್ರಮದ ಹಯರ್ ಸೆಕೆಂಡರಿ ಪ್ರವೇಶೋತ್ಸವ

ಪೈವಳಿಕೆನಗರ, ಜು. 8 : ಪೈವಳಿಕೆನಗರ ಶಾಲೆಯಲ್ಲಿ ಪ್ಲಸ್ ವನ್ ಪ್ರವೇಶೋತ್ಸವ ಜರಗಿತು. ಪಿಟಿಎ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಶ್ರೀ ಜೋಸೆಫ್ ಜೋರ್ಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಭಟ್, ಮದರ್ ಪಿಟಿಎ ಅಧ್ಯಕ್ಷೆ ಶ್ರೀಮತಿ ರೋಹಿಣಿ, ಉಪಾಧ್ಯಕ್ಷೆ ಶ್ರೀಮತಿ ಸರಿತಾ ಶುಭಾಶಂಸನೆಗೈದರು. ಶಿಕ್ಷಕರಾದ ಶ್ರೀ ನಾರಾಯಣ ರಾವ್ ಶಿಸ್ತಿನ ಬಗ್ಗೆ, ಶ್ರೀ ಅಬ್ದುಲ್ ಹಕೀಂ ಅಸಾಪ್ ಬಗ್ಗೆ, ಶ್ರೀ ವಿನೋದ್ ವಿವಿಧ ಸ್ಕಾಲರ್ ಶಿಪ್ ಬಗ್ಗೆ, ಶ್ರೀ ರತ್ನಕುಮಾರ್ ಕೌನ್ಸೆಲಿಂಗ್ ಬಗ್ಗೆ, ಶ್ರೀಮತಿ ಪ್ರಜಿತಾ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ವತಿಯಿಂದ ಸಿಹಿತಿಂಡಿ ಹಂಚಲಾಯಿತು. ಉಪಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕುಂಬಳೆ ಸ್ವಾಗತಿಸಿ ಶ್ರೀಮತಿ ನೀರಜಾ ವಂದಿಸಿದರು. ಪ್ಲಸ್ ಟು ವಿದ್ಯಾರ್ಥಿನಿಯರಾದ ಕುಮಾರಿ ಶ್ರದ್ಧಾ ಹಾಗೂ ಶಾಲಿನಿ ಪ್ರಾರ್ಥನೆ ಹಾಡಿದರು.

No comments:

Post a Comment