ದೈಹಿಕ
ಶಿಕ್ಷಕರಿಗೆ ಬೀಳ್ಕೊಡುಗೆ
ಪೈವಳಿಕೆನಗರ:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುವ
ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ
ಅಮ್ಮೇರಿ ಇವರಿಗೆ ಶಾಲಾ ರಕ್ಷಕ
ಶಿಕ್ಷಕ ಸಂಘ ಹಾಗೂ ಉದ್ಯೋಗಿಗಳ
ಸಂಘದ ವತಿಯಿಂದ ಬೀಳ್ಕೊಡುಗೆ
ಸಮಾರಂಭ ಶಾಲಾ ಸಭಾಂಗಣದಲ್ಲಿ
ನಡೆಯಿತು.
ಕನ್ನಡ
ಸಾಹಿತ್ಯ ಪರಿಷತ್ತಿನ ಕಾಸರಗೋಡು
ತಾಲೂಕು ಘಟಕದ ಅಧ್ಯಕ್ಷರಾದ ರಾಜ್ಯ
ಪ್ರಶಸ್ತಿ ವಿಜೇತ ನಿವೃತ್ತ
ಶಿಕ್ಷಕರಾದ ಶ್ರೀ ರಾಘವ ಬಲ್ಲಾಳ್
ಕಾರ್ಯಕ್ರಮ ಉದ್ಘಾಟಿಸಿದರು.
1992ರಲ್ಲಿ
ವಿದ್ಯಾಭ್ಯಾಸ ಕ್ಷೇತ್ರಕ್ಕೆ
ಪಾದಾರ್ಪಣೆ ಮಾಡಿದ ಶ್ರೀ ವಿಶ್ವನಾಥ
ಅಮ್ಮೇರಿ 2001ರಲ್ಲಿ
ಪೈವಳಿಕೆನಗರ ಶಾಲೆಯಲ್ಲಿ ಸೇವಾ
ಕೈಂಕರ್ಯವನ್ನು ಆರಂಭಿಸಿದರು.ಉತ್ತಮ
ಕ್ರೀಡಾ ಪಟು,
ಸ್ಕೌಟು
ಅಧ್ಯಾಪಕರಾದ ಇವರು ಆಧುನಿಕ
ತಂತ್ರಜ್ಞಾನದ ಕಡೆಗೆ ಯುವಕರನ್ನು
ನಾಚಿಸುವ ಒಲವನ್ನು ಹೊಂದಿದ್ದಾರೆ.
ತಮ್ಮ
ಸರಳ ವ್ಯಕ್ತಿತ್ವ ಹಾಗೂ ಹಾಸ್ಯ
ಪ್ರಜ್ಞೆಯಿಂದಾಗಿ ಸುಲಭದಲ್ಲಿ
ಇತರರೊಂದಿಗೆ ಬೆರೆಯುವ ಇವರು
ಸೇವಾ ಮನೋಭಾವ ಹೊಂದಿದ್ದಾರೆ.
ಶಿಸ್ತಿನ
ಸಿಪಾಯಿಯಾಗಿ ವಿದ್ಯಾರ್ಥಿಗಳಿಗೆ
ಮಾದರಿಯಾದ ಇವರು ಶಾಲೆಗೆ ಉತ್ತಮ
ಹೆಸರು ದೊರಕಿಸುವಲ್ಲಿ ಹೆಚ್ಚಿನ
ಪ್ರಯತ್ನ ಮಾಡಿರುತ್ತಾರಲ್ಲದೆ
ಎಲೆಮರೆಯ ಕಾಯಿಗಳಂತಿರುವ ಗ್ರಾಮೀಣ
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳನ್ನು
ರಾಜ್ಯ ಗುರುತಿಸುವಂತೆ ಮಾಡಿರುತ್ತಾರೆ.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ
ಶ್ರೀ ಜೋರ್ಜ್ ಜೋಸೆಫ್ ಶುಭಾಶಂಸನೆ
ಮಾಡಿದರು.
ಶ್ರೀಮತಿ
ಶಶಿಕಲಾ ಸನ್ಮಾನಿತರ ಪರಿಚಯ ಬಾಷಣ
ಮಾಡಿದರು.
ಶಿಕ್ಷಕರಾದ
ಶ್ರೀಧರ ಭಟ್ ಬೀಡುಬೈಲು,
ವಿಜಯಕುಮಾರ್
ಪೆರ್ಮುದೆ,
ಹಸೀನಾ,
ಬಾಲಕೃಷ್ಣ
ಕಾಯರ್ ಕಟ್ಟೆ,
ಜಿಲ್ಜೋ,
ಪ್ರವೀಣ್
ಕನಿಯಾಲ ಮಾತನಾಡಿದರು.
ಮುಖ್ಯೋಪಾಧ್ಯಾಯರಾದ
ಶ್ರೀನಿವಾಸ ಭಟ್ ಸ್ವಾಗತಿಸಿ
ಸ್ಟಾಫ್ ಸೆಕ್ರೆಟರಿ ರವೀಂದ್ರನಾಥ್.ಕೆ.ಆರ್
ವಂದಿಸಿದರು.
ಶಾಲಾ
ಸಂಪನ್ಮೂಲ ಗುಂಪಿನ ಸಂಚಾಲಕರಾದ
ಶ್ರೀಧರ ಭಟ್ ಕಾರ್ಯಕ್ರಮ
ನಿರ್ವಹಿಸಿದರು.
No comments:
Post a Comment