BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********


ಕಲ್ಲಿಕೋಟೆಯಲ್ಲಿ ಪೈವಳಿಕೆನಗರ ಶಾಲೆಯ ಹೆಸರು ಮೊಳಗಿಸಿದ ಶ್ರದ್ಧಾ

ಕಲ್ಲಿಕೋಟೆ, .16 : ಕಲ್ಲಿಕೋಟೆಯಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಹಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿಜ್ಞಾನ ವಿದ್ಯಾರ್ಥಿನಿ ಶ್ರದ್ಧಾ ನಾಯರ್ ಪಳ್ಳ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಚೆರವತ್ತೂರು ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಈ ಬಾರಿಯ ರಾಜ್ಯ ಶಾಲಾ ಕಲಾ ಸ್ಪರ್ಧೆಗಳು ಕಲ್ಲಿಕೋಟೆ ನಗರದ ವಿವಿಧ ಶಾಲೆಗಳಲ್ಲಾಗಿ ಸಿಂಗರಿಸಿದ 18 ವೇದಿಕೆಗಳಲ್ಲಾಗಿ ನಡೆಯುತ್ತಿವೆ. ಜನವರಿ 15ರಿಂದ 21ರ ತನಕ ನಡೆಯುವ ಬಾಲಕಲಾ ಪ್ರತಿಭೆಗಳ ಪ್ರದರ್ಶನದಲ್ಲಿ 14 ಜಿಲ್ಲೆಗಳಿಂದಾಗಿ ಸಾವಿರಾರು ಪ್ರತಿಭೆಗಳು ರಂಗವೇದಿಕೆಯೇರಲಿದ್ದಾರೆ. ಸಂತ ಆಂಟನಿ ಯುಪಿ ಶಾಲಾ ಸಭಾಂಗಣದ 18ನೇ ವೇದಿಕೆಯಾದ ನೀಲಾಂಬರಿಯಲ್ಲಿ ಪೂರ್ವಾಹ್ನ 11 ಗಂಟೆಗೆ ಆರಂಭವಾದ ಹಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ 16 ಸ್ಪರ್ಧಿಗಳನ್ನು ಹಿಂದಿಕ್ಕಿ ಎ ಗ್ರೇಡ್ ನೊಂದಿಗೆ ಪೈವಳಿಕೆನಗರ ಶಾಲೆಯ ಶ್ರದ್ಧಾ ಪ್ರಥಮ ಸ್ಥಾನಗಳಿಸಿ ಕೇರಳ ರಾಜ್ಯ ಮಟ್ಟದಲ್ಲೇ ಶಾಲೆಯ ಹೆಸರು ಅಚ್ಚೊತ್ತುವಂತೆ ಮಾಡಿದ್ದಾರೆ.ಕಣ್ಣೂರು ಜಿಲ್ಲಾ ಮೊಕೇರಿ ರಾಜೀವ್ ಗಾಂಧಿ ಸ್ಮಾರಕ ಹಯರ್ ಸೆಕೆಂಡರಿ ಶಾಲೆಯ ಆರತಿ ಜಯಕುಮಾರ್ ದ್ವಿತೀಯ, ಕೋಝಿಕೋಡ್ ಜಿಲ್ಲೆಯ ಕುಟ್ಟೋತ್ ಆವಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅನಘ ಲಕ್ಷ್ಮಿ ತೃತೀಯ ಸ್ಥಾನಗಳಿಸಿದ್ದಾರೆ. ಶ್ರದ್ಧಾ ಕಳೆದ ಸಾಲಿನ ಕೇರಳ ರಾಜ್ಯ ಕಲೋತ್ಸವದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಶಾಲೆಗೆ ಕೀರ್ತಿ ತಂದಿದ್ದರು. ಕನ್ನಡ ಕಲಾ ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸೇವೆಯನ್ನು ನೀಡುತ್ತಿರುವ ಇವರಿಗೆ ಸಿಕ್ಕ ಸ್ಥಾನಮಾನವನ್ನು ಮಲಬಾರ್ ಪ್ರದೇಶ ಕೊಂಡಾಡಿದೆ. ಪೈವಳಿಕೆನಗರ ಶಾಲಾ ಮಾಧ್ಯಮ ಕೇಂದ್ರದಲ್ಲಿ ಸೇರಿದ ಪಿಟಿಎ ಕಾರ್ಯಕಾರಿ ಸಮಿತಿ ಸಬೆಯಲ್ಲಿ ಶ್ರದ್ಧಾ ಅವರನ್ನು ಅಭಿನಂದಿಸಲಾಯಿತು.ಮಲಬಾರ್ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆಯಾದ ಮೋಹನಂನಲ್ಲಿ ಜನವರಿ 21ರಂದು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಲಾಮೇಳಕ್ಕೆತೆರೆಬೀಳಲಿದೆ(ಪೈನಗರ್ ವಿಷನ್)






ಪೈವಳಿಕೆನಗರ ಶಾಲೆಯಲ್ಲಿ ಕೊಯ್ಲು ಉತ್ಸವ ಎರಡನೇ ಕಾರ್ಯಕ್ರಮಕ್ಕೆ ಹಿರಿಯರ ಸಾಥ್
ಪೈವಳಿಕೆನಗರ, ಡಿ. 15 : ಪೈವಳಿಕೆನಗರ ಶಾಲಾ ಮಧ್ಯಾಹ್ನದೂಟ ಸಮಿತಿ ಹಾಗೂ ಇಕೋ ಕ್ಲಬ್ ಜಂಟಿಯಾಗಿ ನಡೆಸುವ ಶಾಲಾ ಕೃಷಿತೋಟ ಿಇದೀಗ ಕೊಯ್ಲಿನತ್ತ ಸಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ವಚ್ಛವಾದ, ಪೋಷಕಾಂಶಭರಿತವಾದ, ರುಚಿಯಾದ ತರಕಾರಿಯನ್ನು ನೀಡುವ ನಿಟ್ಟನಲ್ಲಿ ಮೆಣಸು, ಹರಿವೆ, ಬಸಳೆ, ಕುಂಬಳಕಾಯ, ಚೀನಿಕಾಯಿ, ಅಲಸಂಡೆ, ತೊಂಡೆಕಾಯಿ, ಪಡುವಲಕಾಯಿ, ಬದನೆ, ಬೆಂಡೆಕಾಯಿ ಮುಂತಾದ ವಿವಿಧ ತರದ ತರಕಾರಿಗಳು ಕೊಯ್ಲಿಗಾಗಿ ಕಾಯುತ್ತಿವೆ. 6ಸಿ ತರಗತಿಯ ಅಬ್ದುಲ್ ಶಾಕಿರ್,ನಿಝಾಮುದ್ದೀನ್, ರೋಹಿತ್ ಮೊಂತೆರೋ, ಮಹೇಶ್, ಲಕ್ಷ್ಮೀಶ, ಧನುಷ್, ರಕ್ಷಣ್ ರೈ ಮುಂತಾದ ಉತ್ಸಾಹಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಪಾರ ಕಾಳಜಿಯಲ್ಲಿ ಬೆಳೆದ ತರಕಾರಿಗಳು ತೋಟದಲ್ಲಿ ನಳನಳಿಸುತ್ತಿವೆ. ವಿದ್ಯಾರ್ಥಿಗಳು ಪ್ರತಿದಿನವೂ ಪ್ರತಿಕ್ಷಣವೂ ತಪ್ಪದೆ ನೀರುಣಿಸುತ್ತಾ ಗಿಡಗಳನ್ನು ಕಾಳಜಿಯಿಂದ ಬೆಳೆಸುತ್ತಿದ್ದಾರೆ. ಇಂತಹ ಸನ್ಮನಸ್ಸಿನ ವಿದ್ಯಾರ್ಥಿಗಳು ಮತ್ತು ಹಿಂದಿನ ಪ್ರೇರಕ ಶಕ್ತಿಯಾದ ಶಿಕ್ಷಕರ ಇಚ್ಛಾಶಕ್ತಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆಗಳು.

No comments:

Post a Comment