BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮಾದಕ ವಸ್ತು ಜಾಗೃತಿ ತರಗತಿ


ಪೈವಳಿಕೆನಗರ, ಡಿ.10 : ಕೇರಳ ರಾಜ್ಯ ಅಬಕಾರಿ ಇಲಾಖೆ ಮತ್ತು ಪೈವಳಿಕೆನಗರ ಲಹರಿ ವಿರುದ್ಧ ಕ್ಲಬ್ ನ ಸಂಯುಕ್ತಾಶ್ರಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಮಾನವ ಹಕ್ಕುಗಳ ದಿನದಂದು ಮಾದಕ ವಸ್ತು ಜಾಗೃತಿ ತರಗತಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಶಾಲಾ ಮುಖ್ಯ ಸಭಾಂಗಣದಲ್ಲಿ ಕುಂಬಳೆಯ ಸಿವಿಲ್ ಎಕ್ಸೈಸ್ ಆಫೀಸರ್ ಶ್ರೀ ನಾರಾಯಣನ್ ತರಗತಿ ನಡೆಸಿಕೊಟ್ಟರು. ಸಿವಿಲ್ ಅಬಕಾರಿ ಅಧಿಕಾರಿ ಶ್ರೀ ಬಾಬು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ ಶುಭಾಶಂಸನೆ ಮಾಡಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಎಂ.ಎಸ್. ಸ್ವಾಗತಿಸಿ ಪೈವಳಿಕೆನಗರ ಶಾಲಾ ಲಹರಿ ವಿರುದ್ಧ ಕ್ಲಬ್ ಕಾರ್ಯದರ್ಶಿ ನಿತಿನ್ ಕೃಷ್ಣ ವಂದಿಸಿದರು. ಕ್ಲಬ್ ನ ಸಂಚಾಲಕರಾದ ಶ್ರೀ ಸಂತೋಷ್ ಪಾರಂತಟ್ಟ ಕಾರ್ಯಕ್ರಮ ನಿರ್ವಹಿಸಿದರು.


ಪೈವಳಿಕೆನಗರ ಶಾಲೆಯಲ್ಲಿ ಕುಂಬಳಕಾಯಿ ಕೊಯ್ಲು


ಪೈವಳಿಕೆನಗರ, ಡಿ.10 : ಪೈವಳಿಕೆನಗರ ಶಾಲಾ ಇಕೋ ಕ್ಲಬ್, ಆರೋಗ್ಯ ಕ್ಲಬ್, ಬಿಸಿಯೂಟ ಸಮಿತಿ ನಡೆಸುವ ಶಾಲಾ ತರಕಾರಿ ತೋಟದಲ್ಲಿ ಕೊಯ್ಲು ಉತ್ಸವ ನಡೆದ ಬೆನ್ನಲ್ಲೇ ಬೆಳೆ ತೆಗೆಯುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಡಿಸೆಂಬರ್ 10ರ ಶುಭ ಮುಂಜಾನೆ ಎಲ್ ಪಿ ವಿಭಾಗದ ತೋಟದಿಂದ ಕುಂಬಳಕಾಯಿ ಬೆಳೆಯನ್ನು ಕಟಾವು ಮಾಡಲಾಯಿತು. 6ಸಿ ತರಗತಿಯ ಇಕೋ ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಸಂಚಾಲಕರಾದ ಶ್ರೀ ಸುನೀಶ್ ಕುಮಾರ್ , ಪ್ರಶಾಂತ್ ಕುಮಾರ್ ಅಮ್ಮೇರಿ, ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment