BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಆರೋಗ್ಯ ಸಂದೇಶ ಸಾರಿದ ವಿಶ್ವ ಏಯಿಡ್ಸ್ ದಿನಾಚರಣೆ ರಾಲಿ





ಪೈವಳಿಕೆನಗರ, ಡಿ.1 : ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಜಂಟಿ ಸಹಭಾಗಿತ್ವದಲ್ಲಿ ಪೈವಳಿಕೆನಗರ ಶಾಲೆಯಲ್ಲಿ ವಿಶ್ವ ಏಯ್ಡ್ಯ್ ದಿನವನ್ನು ಆಚರಿಸಲಾಯಿತು. ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರಭಾಕರ ರೈ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ವಿಶ್ವನಾಥ ಕಂಚಿಕಟ್ಟೆ, ಹಿರಿಯ ಶಿಕ್ಷಕರಾದ ಶ್ರೀ ನಾರಾಯಣ ರಾವ್, ದೈಹಿಕ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ ಉಪಸ್ಥಿತರಿದ್ದರು.ಪೈವಳಿಕೆ ಕೃಷಿಭವನದಿಂದ ಪಂಚಾಯತ್ ಕಛೇರಿಯವರೆಗೆ ರೆಡ್ ರಿಬ್ಬನ್ ಧರಿಸಿದ ವಿದ್ಯಾರ್ಥಿಗಳ ಏಯಿಡ್ಸ್ ವಿರುದ್ಧ ವರ್ಣರಂಜಿತ ರಾಲಿ ನಡೆಯಿತು. ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬಂದಿಗಳು ಉಪಸ್ಥಿತರಿದ್ದರು..(ಪೈನಗರ್ ವಿಷನ್ ಆರೋಗ್ಯಲೋಕ ವರದಿ)


ಕ್ರಿಸ್ ಮಸ್ ಪರೀಕ್ಷೆಗಳ ಕಲರವದೊಂದಿಗೆ ಎರಡನೇ ಟರ್ಮ್
ಪೈವಳಿಕೆನಗರ, . 23 :ಉತ್ಸವಗಳ ಕಾಲ ಎಂದೇ ಬಿಂಬಿತವಾಗಿದ್ದ ಎರಡನೇ ಟರ್ಮ್ ಇನ್ನು ಕೆಲವೇ ವಾರಗಳಲ್ಲಿ ಮುಗಿಯಲಿದೆ. ಈ ಬಾರಿಯ ಕ್ರಿಸ್ ಮಸ್ ಪರೀಕ್ಷೆಗಳು ಡಿಸೆಂಬರ್ 12ರಿಂದ 19ರವರೆಗೆ ನಡೆಯಲಿದೆ. ಪರೀಕ್ಷಾವೇಳಾ ಪಟ್ಟಿಯನ್ನು ಪರಿಷ್ಕರಿಸಿದ ನಂತರ ಪ್ರತಿ ದಿನ ಪೂರ್ವಾಹ್ನ ಮತ್ತು ಅಪರಾಹ್ನ ಪರೀಕ್ಷೆಗಳು ಇರಲಿವೆ. ಓಣಂ ಪರೀಕ್ಷೆಯಲ್ಲಿ ಪ್ರತಿದಿನ ಒಂದೊಂದು ಪರೀಕ್ಷೆಯಂತೆ ನಿಗದಿಪಡಿಸಲಾಗಿತ್ತು. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿದೆ. ಪ್ಲಸ್ ವನ್ ಮತ್ತು ಪ್ಲಸ್ ಟು ತರಗತಿಗಳ ಮಧ್ಯಾವಧಿ ಪರೀಕ್ಷೆಗಳು ಡಿಸೆಂಬರ್ 15, 16, 17, 18, 29, 30 ಎಂಬ ದಿನಾಂಕಗಳಲ್ಲಾಗಿ ನಡೆಯಲಿದೆ. ಪ್ಲಸ್ ಟು ವಿಭಾಗದ ಪರೀಕ್ಷೆಗಳು ಪೂರ್ವಾಹ್ನವೂ ಪ್ಲಸ್ ವನ್ ವಿಭಾಗದ ಪರೀಕ್ಷೆಗಳು ಅಪರಾಹ್ನವೂ ನಡೆಯಲಿದೆ.



ಯಶಸ್ಸಿನ ಹಾದಿಯಲ್ಲಿ ವಿದ್ಯಾರ್ಥಿನಿಯರು

ಕಾಸರಗೋಡು, .18 : ಮಂಜೇಶ್ವರ ಉಪಜಿಲ್ಲಾ ಕ್ರೀಡೋತ್ಸವದಲ್ಲಿ ಚಾಂಪಿಯನ್ ಶಿಪ್ ಗಳಿಸಿ, ವಿಜ್ಞಾನಮೇಳದಲ್ಲಿ ಹೆಚ್ಚಿನ ಸ್ಥಾನಗಳಿಸಿ ಸಾಧನೆ ಮೆರೆದ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿಯರು ಇದೀಗ ಜಿಲ್ಲಾ ವಿಜ್ಞಾನಮೇಳದಲ್ಲೂ ಸ್ಥಾನ ಗಳಿಸಿದ್ದಾರೆ. ಹಯರ್ ಸೆಕೆಂಡರಿ ವಿಭಾಗದ ನೆಟ್ ಮೇಕಿಂಗ್ ನಲ್ಲಿ ಪ್ಲಸ್ ವನ್ ವಿಜ್ಞಾನ ತರಗತಿಯ ಕಾವ್ಯ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಹಾಗೂ ಬಟ್ಟೆ ತಯಾರಿಯಲ್ಲಿ ಪ್ಲಸ್ ಟು ವಾಣಿಜ್ಯ ವಿಭಾಗದ ಕುಮುದಾಶ್ರೀ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನಗಳಿಸಿದ್ದಾರೆ. ಇವರ ಸಾಧನೆಗೆ ಪೈನಗರ್ ವಿಷನ್ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದು.



ಬೆಲೆಯೇರಿಕೆ ನಿಯಂತ್ರಣಕ್ಕೆ ಪೈವಳಿಕೆನಗರದಲ್ಲಿ ಆರಂಭವಾದ ತರಕಾರಿ ತೋಟ


ಪೈವಳಿಕೆನಗರ: ರೈತನೇ ದೇಶದ ಬೆನ್ನೆಲುಬು. ಕೃಷಿಯಿಲ್ಲದಿದ್ದರೆ ನಾವಿಲ್ಲ. ತಂತ್ರಜ್ಞಾನದ ನಾಗಾಲೋಟದಲ್ಲಿ ಇಂತಹ ಗಾದೆಗಳು ಮೂಲೆಗುಂಪಾಗಿ ಉತ್ಪಾದನೆಯಿಲ್ಲದೆ ಬೆಲೆಯೇರಿಕೆಯನ್ನು ಮೌಸ್ ಕ್ಲಿಕ್ ಗಳ ಮೂಲಕ ವೀಕ್ಷಿಸುತ್ತಿರುವ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಅಳಿಲ ಸೇವೆಯನ್ನು ಸಲ್ಲಿಸುತ್ತಿದೆ ಪೈವಳಿಕೆನಗರ. ಮಧ್ಯಹ್ನದ ಬಿಸಿಯೂಟಕ್ಕಾಗಿ ತರಕಾರಿಗಳನ್ನು ಬೆಳೆಸಿ ಇತರ ಶಾಲೆಗಳಿಗೆ ಮಾದರಿಯಾಗುತ್ತಿದೆ. ಇದು ಪೈವಳಿಕೆನಗರ ಶಾಲೆಯ ಎಲ್ ಪಿ ವಿಭಾಗದಲ್ಲಿ ಕಂಡುಬರುವ ತೋಟ ಶಾಲಾ ವಠಾರದಲ್ಲಿ ಒಳ್ಳೆಯ ಭೂಮಿಯನ್ನು ಕಂಡುಹಿಡಿದು ಹಲವು ದಿನಗಳ ಶ್ರಮವಹಿಸಿ ಹೊಂಡ ತೋಡಿ ಮಣ್ಣು ಅಗೆದು ಮಾಡಿದಂತಹ ಬೃಹತ್ ಕಾರ್ಯ. ಈ ಕೈಂಕರ್ಯಕ್ಕೆ ಕೈಹಾಕಿದವರು ಪೈವಳಿಕೆನಗರ ಶಾಲಾ ಮಧ್ಯಾಹ್ನದೂಟ ಸಮಿತಿ, ಇಕೋ ಕ್ಲಬ್ ಮತ್ತು ಆರೋಗ್ಯ ಕ್ಲಬ್. ಇದರ ಸಂಚಾಲಕರು ಒಟ್ಟು ಸೇರಿ ಅಧ್ಯಯನ ಸಮಯಕ್ಕಿಂತ ಹೆಚ್ಚಾಗಿ ದಿನದಲ್ಲಿ ಎರಡು ಗಂಟೆಗಳನ್ನು ಇದಕ್ಕಾಗಿ ಮೀಸಲಿರಿಸುತ್ತಾರೆ. ಹಾರೆ , ಗುದ್ದಲಿ ಮತ್ತು ಬುಟ್ಟಿಗಳೊಂದಿಗೆ ಹೊರಟರೆ ಸಮಯ ಸರಿದದ್ದೇ ಗೊತ್ತಾಗದು. ಬೆಳಗ್ಗೆ ಗಿಡಗಳಿಗೆ ನೀರುಣಿಸಲು ಅಧ್ಯಾಪಕರೊಂದಿಗೆ ಸಹಕರಿಸುವವರು ಸನ್ಮನಸ್ಸಿನ ವಿದ್ಯಾರ್ಥಿಗಳು. ಇಷ್ಟೆಲ್ಲಾ ಪ್ರಯತ್ನದ ಫಲವಾಗಿ ಕೇವಲ ಕೆಲವೇ ತಿಂಗಳಲ್ಲಿ ಪೈವಳಿಕೆನಗರ ಶಾಲಾ ತರಕಾರಿ ತೋಟ ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಇದಕ್ಕೆ ಹೆಗಲು ಕೊಟ್ಟ ಪೈವಳಿಕೆನಗರ ಶಾಲೆಯ ನಿಸ್ವಾರ್ಥಿ, ಶ್ರಮಜೀವಿ ಶಿಕ್ಷಕರಿಗೆ ಹಾಗೂ ಸಹಾಯವನ್ನೊದಗಿಸಿದ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ನ ಸಾಷ್ಟಾಂಗ ಪ್ರಣಾಮಗಳು(ಪೈನಗರ್ ವಿಷನ್ ಕೃಷಿಲೋಕ ವರದಿ)

ಪೈವಳಿಕೆನಗರ ಶಾಲೆಯಲ್ಲಿ ಹದಿಹರೆಯದ ವಿದ್ಯಾರ್ಥಿಗಳ ಸದ್ಗಮಯ ಕಾರ್ಯಕ್ರಮ



ಪೈವಳಿಕೆನಗರ, 18 : ಹೈಸ್ಕೂಲ್ ವಿದ್ಯಾರ್ಥಿಗಳ ಬೌದ್ಧಿಕ, ಮಾನಸಿಕ ಆರೋಗ್ಯ ಬೆಳೆಸುವ ಹೋಮಿಯೋಪತಿ ಇಲಾಖೆಯ 'ಸದ್ಗಮಯ' ಕಾರ್ಯಕ್ರಮ ಪೈವಳಿಕೆನಗರ ಶಾಲೆಯಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿಗಳ ಮಾನಸಿಕ ಸಂಘರ್ಷ, ಕಲಿಕಾ ವೈಕಲ್ಯಗಳ ತರಗತಿಯನ್ನು ಮಂಜೇಶ್ವರದ ಹೋಮಿಯೋಪತಿ ಡಾಕ್ಟರ್ ವಿನಯಕುಮಾರ್ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ರಕ್ಷಕರು ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ದೇವು ಮೂಲ್ಯ , ಚೇವಾರು ಹೋಮಿಯೋಪತಿ ಡಾಕ್ಟರ್ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜಾ, ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಉಪಸ್ಥಿತರಿದ್ದರು. ವಿಭಿನ್ನ ಕಲಿಕಾ ಸಾಮಾರ್ಥ್ಯದ ವಿದ್ಯಾರ್ಥಿಗಳ ಜವಾಬ್ದಾರಿಯ ಶಿಕ್ಷಕರಾದ ಶ್ರೀ ಜಿಲ್ಜೋ ಎನ್. ಕಾರ್ಯಕ್ರಮ ನಡೆಸಿಕೊಟ್ಟರು.(ಪೈನಗರ್ ವಿಷನ್ ಆರೋಗ್ಯಲೋಕ ವರದಿ)


No comments:

Post a Comment