ಪೈವಳಿಕೆನಗರದಲ್ಲಿ
ಸಹ್ಯಾದ್ರಿ ಸೈನ್ಸ್ ಟೇಲೆಂಟ್
ಹಂಟ್ ವಲಯ ಸ್ಪರ್ಧೆ
ಪೈವಳಿಕೆನಗರ
:
ಮಂಗಳೂರಿನ
ಸಹ್ಯಾದ್ರಿ ಇಂಜಿನಿಯರಿಂಗ್
ಮತ್ತು ಮೇನೇಜ್ ಮೆಂಟ್ ಕಾಲೇಜ್
ಮತ್ತು ಕರ್ನಾಟಕ ಸರಕಾರ ಸಂಶೋಧನಾ
ಕೇಂದ್ರ ಇದರ ಜಂಟಿ ಆಶ್ರಯದಲ್ಲಿ
ನಡೆಸುವ ಸಹ್ಯಾದ್ರಿ ವಿಜ್ಞಾನ
ಟೇಲೆಂಟ್ ಹಂಟ್ 2014ರ
ವಲಯ ಸ್ಪರ್ಧೆಗಳು ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ನಡೆಯಿತು.
ಸಹ್ಯಾದ್ರಿ
ಕಾಲೇಜಿನ ಕಂಪ್ಯೂಟರ್ ಸಯನ್ಸ್
ಇಂಜಿನಿಯರಿಂಗ್ ವಿಭಾಗದ
ಮುಖ್ಯಸ್ಥರಾದ ಶ್ರೀ ಸುಧೀರ್
ಶೆಟ್ಟಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು.
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ಅಧ್ಯಕ್ಷತೆ
ವಹಿಸಿದ್ದರು.
ಪ್ರಭಾರ
ಮುಖ್ಯೋಪಾಧ್ಯಾಯರಾದ ಶ್ರೀ
ರವೀಂದ್ರನಾಥ್ ಕೆ.ಆರ್.
ಶುಭಾಶಂಸನೆಗೈದರು.
ಹಯರ್
ಸೆಕೆಂಡರಿ ವಿಭಾಗದ ಹಿರಿಯ ಶಿಕ್ಷಕರಾದ
ಶ್ರೀ ನಾರಾಯಣ ರಾವ್ ಸ್ವಾಗತಿಸಿ,
ಶ್ರೀ
ರತ್ನಕುಮಾರ್ ವಂದಿಸಿದರು.
ಹಯರ್
ಸೆಕೆಂಡರಿ ವಿದ್ಯಾರ್ಥಿಗಳಲ್ಲಿ
ಸಂಶೋಧನಾ ಕುತೂಹಲ ಹೆಚ್ಚಿಸಿ
ಮನುಕುಲಕ್ಕೆ ಉಪಯುಕ್ತವಾಗುವ
ಅನ್ವೇಷಣೆಗಳನ್ನು ಪ್ರೋತ್ಸಾಹಿಸುವ
ಉದ್ದೇಶದಿಂದ ಸ್ಟಿಲ್ ಮೋಡೆಲ್,
ವರ್ಕಿಂಗ್
ಮೋಡೆಲ್,
ಪ್ರೋಜೆಕ್ಟ್
,
ಗುಂಪು
ರಸಪ್ರಶ್ನೆ,
ಪ್ರಬಂಧ
ಸ್ಪರ್ಧೆ,
ಪೋಸ್ಟರ್
ರಚನೆ,
ಪೇಪರ್
ಪ್ರೆಸೆಂಟೇಶನ್ ಮುಂತಾದ ಹಲವು
ವಿಜ್ಞಾನದ ಸ್ಪರ್ಧೆಗಳನ್ನು
ಹಮ್ಮಿಕೊಳ್ಳಲಾಗಿತ್ತು.
ವಲಯದ
ಹಲವು ಶಾಲೆಗಳಿಂದ ಸುಮಾರು
ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು
ಭಾಗವಹಿಸಿದ್ದರು.
ಪ್ರೋಜೆಕ್ಟ್
ವಿಭಾಗದಲ್ಲಿ ಕುಂಬಳೆ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ ಪ್ಲಸ್
ಟು ವಿಜ್ಞಾನ ವಿದ್ಯಾರ್ಥಿಗಳಾದ
ಪವಿತ್ರ ಕುಮಾರ್,
ರಕ್ಷಿತ್,
ಸುರಕ್ಷಿತ್,
ನಿತಿನ್
ಕುಮಾರ್,
ವಿಘ್ನೇಶ್,
ಹೇಮಂತ್
ಪ್ರಥಮ ಸ್ಥಾನಗಳಿಸಿದರು.
ಇವರು
ನದಿ ಹಾಗೂ ಸಮುದ್ರ ದುರಂತ ಪತ್ತೆ
ಹಚ್ಚುವ ಅಂಡರ್ ವಾಟರ್ ಡಿಟೆಕ್ಟರ್
ಎಂಬ ಯಂತ್ರವನ್ನು ಕಂಡುಹಿಡಿದಿದ್ದರು.
ನದಿ,
ಸಮುದ್ರ,
ಸರೋವರ
ಮುಂತಾದೆಡೆಗಳಲ್ಲಿ ಅಪಘಾತಕ್ಕೀಡಾಗುವ
ದೋಣಿ,
ಹಡಗುಗಳ
ಅವಶೇಷಗಳ ಸ್ಥಾನವನ್ನು ನಿರ್ಣಯಿಸಲು
ಹಾಗೂ ಜೀವಹಾನಿಯನ್ನು ತಡೆಯಲು
ಇದು ಸಹಕಾರಿಯಾಗಿದೆ.
ಬೇಕೂರು
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಪ್ಲಸ್ ಟು ವಿಜ್ಞಾನ ವಿದ್ಯಾರ್ಥಿಗಳಾದ
ಮನೀಷ್,
ಅಶ್ವಿನ್,
ಲೋಹಿತ್,
ಸ್ವಸ್ತಿಕ್,
ಅಖಿಲ್
ಪ್ರೇಮ್ ರಾಜ್ ಸಂಶೋಧಿಸಿದ ಮೊಬೈಲ್
ಫೋನ್ ಡಿಟೆಕ್ಟರ್ ದ್ವಿತೀಯ ಸ್ಥಾನ
ಪಡೆಯಿತು.
ತರಗತಿಗಳಲ್ಲಿ,
ಹಾಲ್
ಗಳಲ್ಲಿ ಮೊಬೈಲ್ ಫೋನ್ ನಿಷೇಧಿತ
ಸ್ಥಳಗಳಲ್ಲಿ ಮೊಬೈಲ್ ಉಪಯೋಗವನ್ನು
ಇದರಿಂದ ಕಂಡುಹಿಡಿಯಬಹುದು.
ರಸಪ್ರಶ್ನೆಯಲ್ಲಿ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆ ಪ್ರಥಮ,
ಬೇಕೂರು
ದ್ವಿತೀಯ,
ಪ್ರಬಂಧ
ಸ್ಪರ್ಧೆಯಲ್ಲಿ ಕುಂಬಳೆ ಸರಕಾರಿ
ಹಯರ್ ಸೆಕೆಂಡರಿ ಶಾಲೆ ಪ್ರಥಮ,
ಪೈವಳಿಕೆನಗರ
ದ್ವಿತೀಯ ಸ್ಥಾನ ಪಡೆಯಿತು.
ಅಪರಾಹ್ನ
ನಡೆದ ಸಮಾರೋಪ ಸಮಾರಂಭದಲ್ಲಿ
ವಿಭಾಗ ಮುಖ್ಯಸ್ಥರಾದ ಶ್ರೀ
ಸುಧೀರ್ ಶೆಟ್ಟಿ ವಿಜೇತರಿಗೆ
ಪ್ರಮಾಣ ಪತ್ರ ಹಾಗೂ ನಗದು ಬಹುಮಾನ
ವಿತರಿಸಿದರು.
ವಿಜೇತರು
ನವೆಂಬರ್ 15ರಂದು
ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್
ನಲ್ಲಿ ನಡೆಯಲಿರುವ 30ವಲಯಗಳ
ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು
ಅರ್ಹರಾಗಿರುತ್ತಾರೆ.
No comments:
Post a Comment