BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

ಪೈವಳಿಕೆನಗರದಲ್ಲಿ ಸಂಭ್ರಮದ ಪ್ರವೇಶೋತ್ಸವ

ಪೈವಳಿಕೆನಗರ, ಜೂನ್1 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶೋತ್ಸವವು ನಡೆಯಿತು. ಪೈವಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುನೀತ ವಾಲ್ಟಿ ಡಿಸೋಜ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಇಬ್ರಾಹೀಂ ಪಾವಲುಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಸತಾಗಿ ಸೇರಿದ ವಿದ್ಯಾರ್ಥಿಗಳು ಅಕ್ಷರದೀಪ ಬೆಳಗಿಸಿದರು. ಪೈವಳಿಕೆ ಕ್ರೆಸೆಂಟ್ ಸ್ಪೋಟ್ರ್ಸ್ ಕ್ಲಬ್ ನೀಡಿದ ಶಾಲಾ ಬ್ಯಾಗುಗಳನ್ನು ಕ್ಲಬ್ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್ ಪೈವಳಿಕೆ ವಿತರಿಸಿದರು. ಶಾಲಾ ನೌಕರರ ಸಂಘದ ವತಿಯಿಂದ ಕಲಿಕೋಪಕರಣ ಕಿಟ್ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲ ಪಿ, ಪ್ರಾಂಶುಪಾಲೆ ಶ್ರೀಮತಿ ವಿಶಾಲಾಕ್ಷಿ ಶುಭಾಶಂಸನೆಗೈದರು. ಪಿಟಿಎ ಉಪಾಧ್ಯಕ್ಷರಾದ ಶ್ರೀ ರಮೇಶ್ ಪೈವಳಿಕೆ, ಪದಾಧಿಕಾರಿಗಳಾದ ಶ್ರೀ ಇಬ್ರಾಹೀಂ ಪೈವಳಿಕೆ, ಶ್ರೀ ಹಸೈನಾರ್, ಶ್ರೀ ಅಬ್ದುಲ್ಲ ಕುಞ್ಞಿ, ಮಾತೃ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಲಿಝಬೆತ್ ಉಪಸ್ಥಿತರಿದ್ದರು. ಶಾಲಾ ನೌಕರರ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಎಂಎಸ್ ಸ್ವಾಗತಿಸಿ ಶಾಲಾ ಆಚರಣ ಸಮಿತಿ ಸಂಚಾಲಕಿ ಶಶಿಕಲ ಕೆ ವಂದಿಸಿದರು.

No comments:

Post a Comment