BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕ್ಲಬ್ ಉದ್ಘಾಟನೆ ಮತ್ತು ವಾಚನ ಸಪ್ತಾಹ ಸಮಾರೋಪ
ಪೈವಳಿಕೆನಗರ, ಜೂ.24: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಾಚನ ವಾರಾಚರಣೆ ಸಮಾರೋಪ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ ಶಾಲಾ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಕಾಸರಗೋಡು ಜಿಲ್ಲಾ ಉಪಯೋಜನಾಧಿಕಾರಿ ಶ್ರೀನಿವಾಸ ಭಟ್ ಕಾಡೂರು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲ.ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ , ಸಾಹಿತಿ ಶ್ರೀ ಪಿ.ಎನ್. ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಲಾ ಆಚರಣಾ ಸಮಿತಿ ಸಂಚಾಲಕರಾದ ಶ್ರೀ ರಾಧಾಕೃಷ್ಣನ್, ಕನ್ನಡ ವಿಭಾಗದ ಶ್ರೀಮತಿ ಶಶಿಕಲಾ.ಕೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು. 10ಸಿ ತರಗತಿಯ ದುರ್ಗಾ ಪ್ರಸಾದ್ ಮಾನವನೆದೆಯಲಿ ಎಂಬ ಭಾವಗೀತೆ ಹಾಡಿ ನೆರೆದವರ ಮನರಂಜಿಸಿದನು. ವಿದ್ಯಾರಂಗ ಸಂಚಾಲಕರಾದ ಶ್ರೀ ಪ್ರವೀಣ್ ಕನಿಯಾಲ ಸ್ವಾಗತಿಸಿ, ಸಮಾಜ ವಿಜ್ಞಾನ ಕ್ಲಬ್ ನ ಶ್ರೀ ಅಬ್ದುಲ್ ಲತೀಫ್ ಕೊಕ್ಕೆಚಾಲ್ ವಂದಿಸಿದರು. ಉದ್ಯೋಗಿಗಳ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ.ಎಂ.ಎಸ್ ನಿರ್ವಹಿಸಿದರು. ಕನ್ನಡ ಸಂಘದ ಸಂಚಾಲಕರಾದ ರೈನಾ ಟೀಚರ್ ನೇತೃತ್ವ ನೀಡಿದರು. ಅಕ್ಷತಾ, ಪ್ರಣೀತಾ, ರಮ್ಯ ಪ್ರಾರ್ಥನೆ ಹಾಡಿದರು.


…………………………………………………………………………………………………
 
ಪೈವಳಿಕೆನಗರ ಶಾಲೆಯಲ್ಲಿ ಹಲಸಿನ ಸೊಳೆ ನಳಪಾಕ
ಪೈವಳಿಕೆನಗರ.ಜೂ21: ಪೈವಳಿಕೆನಗರ ಶಾಲೆಯಲ್ಲಿ ಮಧ್ಯಾಹ್ನದೂಟ ಸಮಿತಿಯ ವತಿಯಿಂದ ಉಪ್ಪಿನಲ್ಲಿ ಇರಿಸಿದ ಹಲಸಿನ ಸೊಳೆಯ ನಳಪಾಕ ತಯಾರಿಸಿ ಉಣಬಡಿಸಲಾಯಿತು. ಇಕೋ ಕ್ಲಬ್ ಸಂಚಾಲಕರಾದ ಶ್ರೀ ಪ್ರಶಾಂತ್ ಕುಮಾರ್ ಅಮ್ಮೇರಿ ಅವರು ದೇಣಿಗೆ ನೀಡಿದ ಹಲಸಿನ ಸೊಳೆಯ ಪದಾರ್ಥವನ್ನು ತಯಾರಿಸಲು ವಿದ್ಯಾರ್ಥಿಗಳು ಸಹಕರಿಸಿದರು.

No comments:

Post a Comment