ಅರ್ಥಮಾಡಿಕೊಂಡು
ಕಲಿತರೆ ಉನ್ನತ ವಿಜಯ:ಫಾತಿಮತ್
ಸಾಹಿರಾ
ಪೈವಳಿಕೆನಗರ,
ಎ.27:
ಪಾಠಗಳನ್ನು
ಅರ್ಥ ಮಾಡಿಕೊಂಡು ಕಲಿತರೆ ಉತ್ತಮ
ಫಲಿತಾಂಶವನ್ನು ಪಡೆಯಬಹುದು ಎಂದು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್
ಗ್ರೇಡ್ ಪಡೆದ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ
ಫಾತಿಮತ್ ಸಾಹಿರಾ ತಿಳಿಸಿದ್ದಾರೆ.
ಫಲಿತಾಂಶದ
ನಂತರ ಪೈನಗರ್ ವಿಷನ್ ನೊಂದಿಗೆ
ಅವರು ಸಂತಸ ಹಂಚಿಕೊಂಡರು.
ಬಾಯಿಕಟ್ಟೆ
ನಿವಾಸಿಯಾಗಿರುವ ಸಾಹಿರಾ ತನ್ನ
ಒಂದನೇ ತರಗತಿಯಿಂದ ಹತ್ತನೇ
ತರಗತಿಯವರೆಗೆ ಪೈವಳಿಕೆನಗರ
ಶಾಲೆಯಲ್ಲಿ ಶಿಕ್ಷಣವನ್ನು
ಪಡೆದಿದ್ದಾರೆ.
ತನ್ನ
ಪ್ರಾಥಮಿಕ ಶಿಕ್ಷಣದ ಅವಧಿಯಲ್ಲೇ
ಪ್ರತಿಭಾವಂತ ವಿದ್ಯಾರ್ಥಿನಿಯಾದ
ಸಾಹಿರಾ ತನ್ನ ಸಾಧನೆಗೆ ರಕ್ಷಕರು,
ಶಿಕ್ಷಕರು
ಹಾಗೂ ಗೆಳತಿಯರು ಎಂದು ಹೆಮ್ಮೆಯಿಂದ
ಹೇಳಿಕೊಳ್ಳುತ್ತಾರೆ.
ದಿನಾಲೂ
5
ಗಂಟೆಗಳಷ್ಟು
ಅಧ್ಯಯನ ನಿರತವಾದರೆ ಪಾಠಗಳು
ಸುಲಭವಾಗುವುದು ಎನ್ನುವ ಸಾಹಿರಾ
ಮುಂದಿನ ವಿದ್ಯಾರ್ಥಿಗಳಿಗೆ
ಎಲ್ಲರೂ ಪಾಸಾಗಬೇಕು,
ಶಾಲೆಗೆ
100
ಶತಮಾನ
ಫಲಿತಾಂಶ ಬರಬೇಕು,
ಹೆಚ್ಚಿನ
ವಿದ್ಯಾರ್ಥಿಗಳಿಗೆ ಎ ಪ್ಲಸ್
ಸಿಗಬೇಕು ಎಂದು ಬಯಸಿದ್ದಾರೆ.
ಉನ್ನತ
ವಿಜಯ ಪಡೆದ ಫಾತಿಮತ್ ಸಾಹಿರಾ
ಅವರಿಗೆ ಪೈನಗರ್ ವಿಷನ್ ಅಭಿನಂದನೆಗಳನ್ನು
ಸಲ್ಲಿಸುವುದು.
ಕೇರಳ
ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ
ಮಾರ್ಚ್ ತಿಂಗಳಲ್ಲಿ ನಡೆಸಿದ ಎಸ್
ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ
ಬುಧವಾರ ಪ್ರಕಟವಾಗಿದ್ದು ರಾಜ್ಯದಲ್ಲಿ
96.59
ಪ್ರತಿಶತ
ವಿದ್ಯಾರ್ಥಿಗಳು ಉನ್ನತ ಶಿಕ್ಷಣದ
ಅರ್ಹತೆ ಪಡೆದಿದ್ದಾರೆ.
22879 ವಿದ್ಯಾರ್ಥಿಗಳು
ಎಲ್ಲಾ ವಿಷಯಗಳಲ್ಲಿ ಎ ಪ್ಲಸ್
ಗ್ರೇಡ್ ಪಡೆದಿದ್ದು 1207
ಶಾಲೆಗಳು
ನೂರು ಶತಮಾನ ಫಲಿತಾಂಶ ದಾಖಲಿಸಿವೆ.
ಪತ್ತನಂತಿಟ್ಟ
ಜಿಲ್ಲೆ ಅತ್ಯಂತ ಹೆಚ್ಚು(99.44)
ವಯನಾಡು
ಕಡಿಮೆ(92.3)
ಫಲಿತಾಂಶ
ಪಡೆದಿದೆ.
ಕಾಸರಗೋಡು
ಜಿಲ್ಲೆಯ ಫಲಿತಾಂಶ 94.80
ಆಗಿದೆ.
ಎಸ್
ಎಸ್ ಎಲ್ ಸಿ ಪ್ರಮಾಣಪತ್ರಗಳು ಮೇ
ಕೊನೆಯ ವಾರ ಆಯಾ ಪರೀಕ್ಷಾ
ಕೇಂದ್ರಗಳನ್ನು ತಲುಪಲಿದೆ.
ಉತ್ತರಪತ್ರಿಕೆಗಳ
ಮರುಮೌಲ್ಯಮಾಪನ,
ಸೂಕ್ಷ್ಮ
ಪರಿಶೋಧನೆ,
ಯಥಾಪ್ರತಿಗಳಿಗೆ
ಎಪ್ರಿಲ್ 28ರಿಂದ
ಮೇ ಮೂರರವರೆಗೆ ಆನ್ ಲೈನ್ ಅರ್ಜಿ
ಸಲ್ಲಿಸಬಹುದು.
ಒಂದೆರಡು
ವಿಷಯಗಳಲ್ಲಿ ಅನುತ್ತೀರ್ಣರಾದ
ವಿದ್ಯಾರ್ಥಿಗಳಿಗಾಗಿ ಸೇ ಪರೀಕ್ಷೆ
ಮೇ 23ರಿಂದ
27ರವರೆಗೆ
ನಡೆಯಲಿದೆ.(ಪೈನಗರ್
ವಿಷನ್ ಎಚ್ ಎಸ್ ಬ್ಯೂರೋ ವರದಿ)
No comments:
Post a Comment