ರಾಜ್ಯ
ಮಟ್ಟದ ಪ್ರತಿಭೆಗಳಿಗೆ ಬಹುಮಾನ
ವಿತರಣೆ
ಪೈವಳಿಕೆನಗರ,
ಫೆ.1:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಕೇರಳ ರಾಜ್ಯ ಮಟ್ಟದ ಪ್ರತಿಭೆಗಳನ್ನು
ಸನ್ಮಾನಿಸಲಾಯಿತು.
ಕೇರಳ
ಶಾಲಾ ಕಲೋತ್ಸವದ ಹಯರ್ ಸೆಕೆಂಡರಿ
ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ
ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ
ಪಡೆದ ಶ್ರದ್ಧಾ ಎನ್ ಅವರಿಗೆ
ನಿವೃತ್ತ ಪ್ರಾಂಶುಪಾಲರಾದ ಶ್ರೀ
ಕೋಟಿ.ಕೆ.
ಪಾರಿತೋಷಕ
ನೀಡಿ ಗೌರವಿಸಿದರು.
ಕೇರಳ
ರಾಜ್ಯ ವೃತ್ತಿಪರಿಚಯಮೇಳದಲ್ಲಿ
ಹೈಸ್ಕೂಲ್ ವಿಭಾಗದ ಎಂಬ್ರಾಯಿಡರಿಯಲ್ಲಿ
ಎ ಗ್ರೇಡ್ ಪಡೆದ ಹನ್ನತ್ ಬೀಬಿ
ಅವರಿಗೆ ಹಸೀನಾ ಟೀಚರ್ ಪಾರಿತೋಷಕ
ನೀಡಿ ಗೌರವಿಸಿದರು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಪಿ,
ಪ್ರಾಂಶುಪಾಲರಾದ
ಶ್ರೀ ವಿಶ್ವನಾಥ ಕುಂಬಳೆ ,
ಪಿಟಿಎ
ಅಧ್ಯಕ್ಷ ಶ್ರೀ ಲಾರೆನ್ಸ್ ಡಿಸೋಜಾ,
ಉಪಸ್ಥಿತರಿದ್ದರು.
ಶಿಕ್ಷಕರಾದ
ಶ್ರೀ ನಾರಾಯಣ ರಾವ್ ನಿರ್ವಹಿಸಿದರು.
No comments:
Post a Comment