ವಿದ್ಯಾರಂಗ
ಮಂಜೇಶ್ವರ ಉಪಜಿಲ್ಲಾ ಸಾಹಿತ್ಯೋತ್ಸವ
2016
ಪೈವಳಿಕೆನಗರ,
ಜ.19:
ಸರ್ವ
ಶಿಕ್ಷಾ ಅಭಿಯಾನ ಕಾಸರಗೋಡು,
ಮಂಜೇಶ್ವರ
ಬಿ.ಆರ್.ಸಿ
ನೇತೃತ್ವದಲ್ಲಿ ಮಂಜೇಶ್ವರ
ಉಪಜಿಲ್ಲಾ ವಿದ್ಯಾರಂಗ ಕಲಾ
ಸಾಹಿತ್ಯ ವೇದಿಕೆ ವತಿಯಿಂದ
ಮಂಜೇಶ್ವರ ಉಪಜಿಲ್ಲಾ ಮಟ್ಟದ
ವಿದ್ಯಾರಂಗ ಸಾಹಿತ್ಯೋತ್ಸವ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಮಂಜೇಶ್ವರ
ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ
ಶ್ರೀ ಎ.ಕೆ.ಎಂ
ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು.
ಪೈವಳಿಕೆ
ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಶ್ರೀಮತಿ ಭಾರತಿ ವಿ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ
ನಂದಿಕೇಶನ್ ಪ್ರಾಸ್ತಾವಿಕವಾಗಿ
ಮಾತನಾಡಿದರು.
ನಿವೃತ್ತ
ಪ್ರಾಂಶುಪಾಲರಾದ ಶ್ರೀ ಪಿ.ಎನ್.
ಮೂಡಿತ್ತಾಯ
ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪೈವಳಿಕೆ
ಗ್ರಾಮಪಂಚಾಯತ್ ಉಪಾಧ್ಯಕ್ಷರಾದ
ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ,
ಪೈವಳಿಕೆ
ಗ್ರಾಮ ಪಂಚಾಯತ್ ವಿದ್ಯಾಭ್ಯಾಸ
ಸ್ಥಾಯಿ ಸಮಿತಿ ಅಧ್ಯಕ್ಷರಾದ
ಶ್ರೀಮತಿ ಫಾತಿಮತ್ ಝೌರಾ,
ಯೋಜನಾಧಿಕಾರಿ
ಶ್ರೀ ಶ್ರೀನಿವಾಸ.
ಕೆ,
ಸರ್ವ
ಶಿಕ್ಷಾ ಅಭಿಯಾನ ಮಂಜೇಶ್ವರ
ಉಪಜಿಲ್ಲಾ ಯೋಜನಾಧಿಕಾರಿ ಶ್ರೀ
ವಿಜಯಕುಮಾರ್,
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಲಾರೆನ್ಸ್ ಡಿಸೋಜಾ ಶುಭಾಶಂಸನೆ
ಮಾಡಿದರು.
ಉದ್ಘಾಟನಾ
ಕಾರ್ಯಕ್ರಮದ ನಂತರ ಎಲ್ ಪಿ,
ಯುಪಿ,
ಹೈಸ್ಕೂಲ್
ವಿಭಾಗಗಳಲ್ಲಾಗಿ ಕನ್ನಡ ಮತ್ತು
ಮಲಯಾಳ ಭಾಷೆಗೆ ಸಂಬಂಧಿಸಿದ
ಕಥಾರಚನೆ,
ಕವಿತಾರಚನೆ,
ಪುಸ್ತಕಾಸ್ವಾದನೆ,
ಚಿತ್ರರಚನೆ,
ಜನಪದ
ಗೀತೆ,
ಚಿತ್ರಕಥಾ
ರಚನೆ ಕಮ್ಮಟಗಳು ನಡೆದವು.
ಅಪರಾಹ್ನ
ನಡೆದ ಸಮಾರೋಪ ಸಮಾರಂಭದಲ್ಲಿ
ವಿದ್ಯಾಧಿಕಾರಿ ಶ್ರೀ ನಂದಿಕೇಶನ್,
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಪ್ರಾಂಶುಪಾಲರಾದ ಶ್ರೀ ವಿಶ್ವನಾಥ
ಕುಂಬಳೆ ಬಹುಮಾನ ವಿತರಿಸಿದರು.
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ ಪಿ ಸ್ವಾಗತಿಸಿ,
ಮಂಜೇಶ್ವರ
ಉಪಜಿಲ್ಲಾ ವಿದ್ಯಾರಂಗ ಕಲಾ
ಸಾಹಿತ್ಯ ವೇದಿಕೆಯ ಸಂಚಾಲಕರಾದ
ಶ್ರೀಮತಿ ಶಶಿಕಲಾ ವಂದಿಸಿದರು.
ಶಾಲಾ
ಎಸ್.
ಆರ್.ಜಿ
ಕನ್ವಿನರ್ ಕೃಷ್ಣಮೂರ್ತಿ ಎಂ.ಎಸ್
ನಿರೂಪಿಸಿದರು.
പൈവളിഗെനഗർ : മഞ്ചേശ്വര ഉപജില്ലാ വിദ്യാരംഗ കലാ സാഹിത്യ
വേദിയുടെ നേതൃത്വത്തില്, സര്വ ശിക്ഷാ അഭിയാന് കാസറഗോഡ് ബി.ആര് സി മഞ്ചേശ്വര
ത്തിൻറെ സഹായത്തോടെ മഞ്ചേശ്വര സബ് ജില്ലാ വിദ്യാരംഗ സാഹിത്യോത്സവ പൈവളിഗെനഗർ ഹയർ
സെകൻറരി സ്കൂളില് നടന്നു. മഞ്ചേശ്വര ബ്ലോക് പഞ്ചായത് പ്രസിഡൻറ് എകെഎം അശ്രഫ്
ഉഉദ്ഘാടനം ചെയ്തു. പൈവളിഗെ ഗ്രാമ പഞ്ചായത് പ്രസിഡൻറ് ഭാരതി ഷെട്ടി അധ്യക്ഷത
വഹിച്ചു. മഞ്ചേശ്വര എഇഒ നന്ദികേശൻ പ്രാസ്താവികമായി സംസാരിച്ചു. പി.എൻ. മൂടിത്തായ, പഞ്ചായത്
വൈസ് പ്രസിഡൻറ് സുനിതാ വാല്ടി ഡിസൂസാ, സ്റാൻഡിങ് കമിററി ചെയർപെർസണ് ഫാതിമത് ഝൌരാ,
എപിഒ ശ്രീനിവാസൻ, ബിപിഒ വിജയകുമാർ, പിടിഎ പ്രസിഡൻറ് ലാരെൻസ് ഡിസൂസാ സംസാരിച്ചു.
ഹെഡ് മാസ്റർ ശ്യാമളാ സ്വാഗതവും വിദ്യാരംഗ മഞ്ചേശ്വര സബ് ജില്ലാ കൻവിനർ ശശികലാ
നന്ദിയും പരഞ്ഞു. കൃഷ്ണമൂർത്തി പരിപാടിയുടെ അവതാരകനായി.
No comments:
Post a Comment