BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪುಟಾಣಿ ವಿಜ್ಞಾನಿಗಳ ಮನದ ಮಾತಾದ ಪೈವಳಿಕೆನಗರ ವಿಜ್ಞಾನ ಸಮ್ಮೇಳನ
ಪೈವಳಿಕೆನಗರ, ಜು.10 : ಅದು ಜುಲೈ 10 ಶುಕ್ರವಾರ ಸಮಯ ಅಪರಾಹ್ನ 1.30 ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಮಾಧ್ಯಮ ಕೇಂದ್ರದಲ್ಲಿ ವಿಜ್ಞಾನ ಸಮ್ಮೇಳನ. ಯಾವಾಗಲೂ ಸಭೆ ಸಮಾರಂಭ, ಮಾಧ್ಯಮ ಕೈಂಕರ್ಯಗಳಿಂದ ಗಿಜಿಗಿಡುತ್ತಿದ್ದ ಮಾಧ್ಯಮ ಕೇಂದ್ರ ಅಂದೇಕೋ ವಿಜ್ಞಾನಿಗಳ ಪ್ರಯೋಗಾಲಯವಾಗಿ ಬದಲಾಯಿತು. ಶಾಲಾ ವಿಜ್ಞಾನ ಕ್ಲಬ್ ನ ನೇತೃತ್ವದಲ್ಲಿ ಅಂದು ವಿಜ್ಞಾನ ಸರಳ ಪ್ರಯೋಗಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹರಿಯುವ ನೀರಿನಿಂದ ಕಾರ್ಯನಿರ್ವಹಿಸುವ ಟರ್ಬೈನುಗಳು, ವಿವಿಧ ಸಸ್ಯಗಳು, ದಾಸವಾಳದ ಲಿಟ್ಮಸ್ ಪೇಪರ್ ಮುಂತಾದ ವಸ್ತುಗಳು ತುಂಬಿದ್ದವು. ಪುಟಾಣಿ ವಿಜ್ಞಾನಿಯೊಬ್ಬಳು ಗಿಳಿಯನ್ನು ಮುಟ್ಟದೆಯೇ ಗೂಡಿನೊಳಗೆ ಸೇರಿಸಿದ್ದು ಕಣ್ಣಿನ ದೃಷ್ಟಿ ಛಲಕ್ಕೆ ಉದಾಹರಣೆಯಾಯಿತು. ಅಕ್ಷತಾ ಮತ್ತು ಬಳಗದವರು ನಡೆಸಿದ ಸಾಂದ್ರತೆಯ ಪ್ರಯೋಗ ನಿಂಬೆಹಣ್ಣನ್ನು ಉಪ್ಪಿನ ದ್ರಾವಣದಲ್ಲಿ ತೇಲುವಂತೆ ಮಾಡಿತು.ಅಕ್ಷಯ್ ಮತ್ತು ಬಳಗದವರು ಉಪ್ಪುನೀರಿನಲ್ಲಿ ಎಲೆಯನ್ನು ಬಾಡುವಂತೆ ಮಾಡಿದ್ದು ರಸಾಯನಶಾಸ್ತ್ರದ ವಿವಿಧ ಮಜಲುಗಳನ್ನು ತೆರೆದಿಟ್ಟಿತು. ಚೋಕಿನಲ್ಲಿ ದೀಪ ಉರಿಸಬಹುದು ಎಂಬ ಕಲ್ಪನೆ ವಿದ್ಯಾರ್ಥಿಗಳಿಗೆ ಮನದಟ್ಟಾಯಿತು. ಉರಿಯುವುದಕ್ಕೆ ಆಮ್ಲಜನಕ ಅಗತ್ಯ ಎಂಬುದು ಜನಜನಿತ ವಿಷಯವಾದರೂ ಪ್ರಯೋಗದ ಮೂಲಕ ಅದು ಇನ್ನೂ ಸ್ಪಷ್ಟವಾಯಿತು. ಚರಣ್ ರಾಜ್ ಮತ್ತು ಬಳಗದವರು ದಾಸವಾಳ ಲಿಟ್ಮಸ್ ಉಪಯೋಗಿಸಿ ಆಮ್ಲ ಮತ್ತು ಕ್ಷಾರದ ಪ್ರಯೋಗ ಮಾಡಿದರು. ಮೋಹನ ಮತ್ತು ಬಳಗದವರು ತಯಾರಿಸಿದ ಕಸದಿಂದ ತಯಾರಿಸಿದ ಟರ್ಬೈನ್ ಆಕರ್ಷಕವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಕೃಷ್ಣಮೂರ್ತಿ ಸರ್ ನೀರು ತುಂಬಿದ ಗ್ಲಾಸ್ ನ್ನು ತೆಳುವಾದ ಪೇಪರ್ ಉಪಯೋಗಿಸಿ ತಲೆಕೆಳಗಾಗಿ ನಿಲ್ಲಿಸಿದ್ದು ವಿದ್ಯಾರ್ಥಿಗಳ ಚಪ್ಪಾಳೆಗೆ ಕಾರಣವಾಯಿತು. ಶಿಕ್ಷಕರಾದ ಶ್ರೀ ಸಂತೋಷ್ ಉಪಸ್ಥಿತರಿದ್ದರು.

No comments:

Post a Comment