ಕಾಸರಗೋಡು
ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ
ಸೋಮವಾರ ರಜೆ
ಕಾಸರಗೋಡು,
ಜು.19:
ಕಳೆದ
ಗುರುವಾರದಿಂದ ಬಿಟ್ಟು
ಬಿಡದೆ
ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ
ಕಾಸರಗೋಡು ಜಿಲ್ಲೆಯಾದ್ಯಂತ
ತಗ್ಗು
ಪ್ರದೇಶಗಳು ಜಲಾವೃತವಾಗಿದೆ.
ಮಳೆಯ
ಕಾರಣದಿಂದಾಗಿ ಸೋಮವಾರ ಜುಲೈ
20ರಂದು
ಕಾಸರಗೋಡು ಜಿಲ್ಲೆಯ ಎಲ್ಲಾ
ವೃತ್ತಿಪರ ಕಾಲೇಜುಗಳು ಸೇರಿದಂತೆ
ಎಲ್ಲಾ ವಿದ್ಯಾಭ್ಯಾಸ ಸಂಸ್ಥೆಗಳಿಗೆ
ಜಿಲ್ಲಾಧಿಕಾರಿ ರಜೆ ಸಾರಿ ಆದೇಶ
ಹೊರಡಿಸಿದ್ದಾರೆ.
ಹಯರ್
ಸೆಕೆಂಡರಿ ಕೋಂಬಿನೇಶನ್ ಟ್ರಾನ್ಸ್
ಫರ್ ಪ್ರಕ್ರಿಯೆ ನಡೆಯುತ್ತಿರುವುದರಿಂದ
ಇದಕ್ಕೆ ಸಂಬಂಧಪಟ್ಟ ಕಛೇರಿಗಳು
ತೆರೆದು ಕಾರ್ಯನಿರ್ವಹಿಸುವವು
ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯಗಳ
ಪರೀಕ್ಷಾ ದಿನಾಂಕಗಳಲ್ಲಿ
ಬದಲಾವಣೆಯಿಲ್ಲ.
ಇದೇ
ರೀತಿ ಜುಲೈ 23ರವರೆಗೆ
ರಾಜ್ಯದಲ್ಲಿ ಮಳೆ ಲಭಿಸಲಿದೆ
ಎಂದು ಹವಾಮಾನ ಇಲಾಖೆ ತಿಳಿಸಿದೆ
(ಪೈನಗರ್
ವಿಷನ್ )
No comments:
Post a Comment