BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕನ್ನಡ ವಾಚನಾ ಸ್ಪರ್ಧೆ
ಪೈವಳಿಕೆನಗರ, ಜೂ.24: ಸಾಹಿತಿ ಪಿ ಎನ್ ಪಣಿಕ್ಕರ್ ನೆನಪಿನಲ್ಲಿ ವಾಚನಾ ಸಪ್ತಾಹವನ್ನು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಯುಪಿ ವಿಬಾಗದಲ್ಲಿ ಆಚರಿಸಲಾಯಿತು. ಪ್ರತಿಯೊಬ್ಬರೂ ಲೈಬ್ರೆರಿಯಿಂದ ಒಂದೊಂದು ಕಥೆ ಪುಸ್ತಕ ಪಡೆದು ಓದಿ ಟಿಪ್ಪಣಿ ತಯಾರಿಸಿದರು. ಇದಲ್ಲದೆ ಕನ್ನಡ ಓದುವ ಸ್ಪರ್ಧೆಯನ್ನು ಪ್ರತಿ ತರಗತಿಗಳಲ್ಲಿ ನಡೆಸಿ ಪ್ರತಿ ತರಗತಿಯಿಂದ ಮೂವರನ್ನು ಆಯ್ಕೆ ಮಾಡಲಾಯಿತು. ಜೂನ್ 24 ಬುಧವಾರದಂದು ಶಾಲಾ ಸಭಾಂಗಣದಲ್ಲಿಅಂತಿಮ ಹಂತದ ಸ್ಪರ್ಧೆ ಜರಗಿತು. ಕನ್ನಡ ಓದುವಿಕೆಯಲ್ಲಿ ಉತ್ತಮ ಆರೋಗ್ಯಕರ ಪೈಪೋಟಿ ಕಂಡುಬಂತು. ಪ್ರತಿ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳನ್ನು ಆರಿಸಲಾಯಿತು. 5 ಕನ್ನಡದಲ್ಲಿ ಕಬೀರ್ ಪ್ರಥಮ, ಅವುಫಾ ದ್ವಿತೀಯ, 5 ಮಲಯಾಳದಲ್ಲಿ ಫಾತಿಮತ್ ತಂಸೀರಾ ಪ್ರಥಮ, ಮೊಹಮ್ಮದ್ ದ್ವಿತೀಯ, 6ಕನ್ನಡ ಅರ್ ಫಾತ್ ಪ್ರಥಮ, ಮನೀಷ್ ದ್ವಿತೀಯ, 6 ಮಲಯಾಳದಲ್ಲಿ ಮರಿಯಮತ್ ಶಾನಿಯಾ ಪ್ರಥಮ, ಫಾತಿಮಾ ದ್ವಿತೀಯ, 7 ಕನ್ನಡದಲ್ಲಿ ಆಧಿರಾ ಪ್ರಥಮ, ಫಾತಿಮತ್ತ್ ರಿಹಾನಾ ದ್ವಿತೀಯ , 7 ಮಲಯಾಳದಲ್ಲಿ ಆಧಿರಾ ಸಂತೋಷ್ ಪ್ರಥಮ, ಅಲೀಮತ್ ಶಫಾ ದ್ವಿತೀಯ ಸ್ಥಾನಗಳಿಸಿದರು. ವಿಜೇತರಿಗೆ ಪೈನಗರ್ ವಿಷನ್ ಬಳಗದ ತುಂಬು ಹೃದಯದ ಅಭಿನಂದನೆಗಳು. ಶ್ರೀಧರ ಭಟ್ ಬೀಡುಬೈಲು ಮತ್ತು ಸುಮಿತ್ರಾ ಟೀಚರ್ ನಿರ್ಣಾಯಕರಾಗಿದ್ದರು. ಪ್ರವೀಣ್ ಕನಿಯಾಲ ಮತ್ತು ಪ್ರಶಾಂತ್ ಕುಮಾರ್ ಅಮ್ಮೇರಿ ಕಾರ್ಯಕ್ರಮ ನಡೆಸಿಕೊಟ್ಟರು.(ವರದಿ ಫಾತಿಮತ್ ಝೌರಾ 7)

No comments:

Post a Comment