BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಜಿಲ್ಲಾ ಮಟ್ಟದಲ್ಲಿ ಬೆಳಗಿದ ಅನನ್ಯ ಪ್ರತಿಭೆ ಧ್ವಾನಿಷ್

ಪೈವಳಿಕೆನಗರ, ಡಿ.10 : ಚೆರ್ಕಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಡಿಸೆಂಬರ್ 10ರಂದು ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ ಪೈವಳಿಕೆನಗರ ಶಾಲೆಯ 7ಸಿ ತರಗತಿಯ ವಿದ್ಯಾರ್ಥಿ ಧ್ವಾನಿಷ್ ಕನ್ನಡ ಕವಿತಾರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಮಿತಭಾಷಿ, ವಿನಯವಂತ, ವಿಧೇಯ ವಿದ್ಯಾರ್ಥಿಯಾದ ದ್ವಾನಿಷ್, ಪೈನಗರ್ ವಿಷನ್ ಸಕ್ರಿಯ ಪ್ರತಿನಿಧಿಯಾಗಿದ್ದಾನೆ. ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಈತ ಪ್ರಥಮ ಸ್ಥಾನ ಪಡೆದಿದ್ದನು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ಪೈವಳಿಕೆನಗರ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿದ ಧ್ವಾನಿಷ್ ನಿಗೆ ಪೈನಗರ್ ವಿಷನ್ ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು.

ಪೈವಳಿಕೆನಗರ ಶಾಲೆಯಲ್ಲಿ ಕೊಯ್ಲು ಉತ್ಸವ ಎರಡನೇ ಕಾರ್ಯಕ್ರಮಕ್ಕೆ ಹಿರಿಯರ ಸಾಥ್


ಪೈವಳಿಕೆನಗರ, ಡಿ. 10 :ಶಾಲಾ ಮಧ್ಯಾಹ್ನದೂಟ ಸಮಿತಿ ಬೆಳೆಸಿದ ತರಕಾರಿ ತೋಟದಲ್ಲಿ ಈಗ ಕೊಯ್ಲಿನ ಹಬ್ಬ. ಶಿಕ್ಷಕರು ವಿದ್ಯಾರ್ಥಿಗಳ ಸಮೇತ ಅತ್ಯುತ್ಸಾಹದಿಂದ ಬೆಳೆಸಿ ಕೊಯ್ಲು ನಡೆಸಿ ಪದಾರ್ಥ ಮಾಡುವುದರಲ್ಲಿರುವ ಆನಂದ ಇನ್ನೊಂದರಲ್ಲಿರಲಿಕ್ಕಿಲ್ಲ. ಸೋಮವಾರ ಬೆಳಗ್ಗೆ ಶಾಲಾ ಎಲ್ ಪಿ ವಿಭಾಗದಲ್ಲಿನ ತರಕಾರಿ ತೋಟದಲ್ಲಿ ಬೆಳೆಸಿದ ಬೂದುಕುಂಬಳಕಾಯಿಯನ್ನು ಕಟಾವು ಮಾಡಲಾಯಿತು. ಈ ಸಂದರ್ಭದಲ್ಲಿ ತೋಟದ ಸಂಚಾಲಕರಾದ ಶ್ರೀ ಸುನೀಶ್ ಕುಮಾರ್, ಪ್ರಶಾಂತ್ ಕುಮಾರ್ ಅಮ್ಮೇರಿ, ಹಿರಿಯ ಶಿಕ್ಷಕರಾದ ಶ್ರೀ ವಿಶ್ವನಾಥ ಅಮ್ಮೇರಿ ಉಪಸ್ಥಿತರಿದ್ದರು. ತರಕಾರಿ ತೋಟದ ಮೇಲುಸ್ತುವಾರಿ ಹೊಂದಿರುವ ವಿದ್ಯಾರ್ಥಿಗಳು ಕಟಾವು ನಡೆಸಿದರು. (ಪೈನಗರ್ ವಿಷನ್ ಕೃಷಿ ಲೋಕ ವರದಿ )

1 comment: