ರಮ್ಯಶ್ರೀ
ವೈಯಕ್ತಿಕ ಚಾಂಪಿಯನ್
ಪೈವಳಿಕೆನಗರ
ನ.7
: ಮಂಜೇಶ್ವರ
ಉಪಜಿಲ್ಲಾ ಕ್ರೀಡೋತ್ಸವ ತೆರೆ
ಕಾಣುವುದರೊಂದಿಗೆ
ಪೈವಳಿಕೆನಗರ ಶಾಲೆಗೆ ಒಂದು
ಸಿಹಿಸುದ್ದಿ ಕಾದಿತ್ತು.
ಸೀನಿಯರ್
ಹುಡುಗಿಯರ ಟ್ರಿಪಲ್ ಜಂಪ್,
ಹೈ
ಜಂಪ್ ಮತ್ತು ಲೋಂಗ್
ಜಂಪ್ ನಲ್ಲಿ ಪ್ರಥಮ ಸ್ಥಾನ ಪಡೆದ
ಪೈವಳಿಕೆನಗರ ಶಾಲೆಯ ಪ್ಲಸ್ ಟು
ಹ್ಸುಮಾನಿಟೀಸ್ ವಿದ್ಯಾರ್ಥಿನಿ
ರಮ್ಯಶ್ರೀ 15
ಅಂಕಗಳೊಂದಿಗೆ
ವೈಯಕ್ತಿಕ ಚಾಂಪಿಯನ್
ಶಿಪ್ ಗೆ ಅರ್ಹಳಾಗಿದ್ದಾಳೆ.
ಉತ್ತಮ
ಕ್ರೀಡಾಪಟುವಾಗಿರುವ
ರಮ್ಯಶ್ರೀ ಕಳೆದ ವರ್ಷ ಕೇರಳರಾಜ್ಯಮಟ್ಟದ
ಪೈಕಾ ಸ್ಪೋರ್ಟ್ಸ್ ನಲ್ಲಿ ಹೈಜಂಪ್
ನಲ್ಲಿ ಎ ಗ್ರೇಡ್ ನೋಂದಿಗೆ 5
ನೇ
ಸ್ಥಾನ ಪಡೆದಿದ್ದಳು.
ಉಪಜಿಲ್ಲಾ
ಕ್ರೀಡೋತ್ಸವದ ಧ್ವಜಾವತರಣ ಕಳೆದು
ಮುಂದಿನ ವರ್ಷದ
ಕ್ರೀಡೋತ್ಸವಕ್ಕೆ ಅಣಿಗೊಳಿಸುವ
ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ
ರಮ್ಯಶ್ರೀ ಭಾಗವಹಿಸಿ ಪೈವಳಿಕೆನಗರ
ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ
ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.
ಕ್ರೀಡೋತ್ಸವದಲ್ಲಿ
ಶಾಲೆಗೆ ಕೀರ್ತಿ ತಂದ ರಮ್ಯಶ್ರೀಗೆ
ಪೈನಗರ್ ವಿಷನ್ ಬಳಗದ
ತುಂಬು ಹೃದಯದ ಅಭಿನಂದನೆಗಳು.
No comments:
Post a Comment