BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಎಲ್ಲರ ಚಿತ್ತ ಐಲ ಶಾಲೆಯತ್ತ

ಮಂಜೇಶ್ವರ, .18 : ಕೇರಳ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ವೇದಿಕೆಯಾದ ಅಂತರ್ ಶಾಲಾ ಸ್ಪರ್ಧೆಗಳು ಕೊನೆಯ ಹಂತದಲ್ಲಿವೆ. ಕ್ರೀಡೋತ್ಸವ ಹಾಗೂ ವಿಜ್ಞಾನ ಮೇಳದ ಕಂದಾಯ ಜಿಲ್ಲಾ ಮಟ್ಟದ ಸ್ಪರ್ಧೆಗಳು ಮುಗಿದಿದ್ದು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಕ್ಷಣಗಣನೆ ಆರಂಭವಾಗಿದೆ. ಕಲಾರಂಗದ ಪ್ರತಿಭೆಗಳ ಉತ್ಸವಕ್ಕಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಿಗಾಗಿ ಐಲ ಶಾರದಾ ಬೋವಿಸ್ ಹಾಗೂ ಅಯ್ಯೂರು ಜಮಾಯತ್ ಇಸ್ಲಾಮಿಕ್ ವಿದ್ಯಾಲಯಗಳು ಸನ್ನದ್ದವಾಗಿದೆ. ನವೆಂಬರ್ 18ರಂದು ಆನ್ ಲೈನ್ ನೋಂದಾವಣೆ ಮುಗಿದ ನಂತರ ಸ್ಪರ್ಧೆಗಳ ಹಣಾಹಣಿಗಾಗಿ ಈ ವಿದ್ಯಾಲಯಗಳು ಕುತೂಹಲದಿಂದ ಕಾಯುತ್ತಿವೆ. ವೇದಿಕೆಯೇತರ ಸ್ಪರ್ಧೆಗಳು ನವೆಂಬರ್ 29 ಶನಿವಾರದಂದು ಹಾಗೂ ವೇದಿಕೆಯ ಸ್ಪರ್ಧೆಗಳು ದಶಂಬರ್ 1, 2 ಮತ್ತು 3ರಂದು ನಡೆಯಲಿವೆ. ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಯಿಂದ ವೇದಿಕೆ ಮತ್ತು ವೇದಿಕೆಯೇತರ ಸ್ಪರ್ಧೆಗಳಲ್ಲಾಗಿ ಸುಮಾರು 100ಕ್ಕೂ ಹೆಚ್ಚು ಕಲಾ ಪ್ರತಿಭೆಗಳು ಪ್ರತಿಭಾ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ಶುಭವನ್ನು ಹಾರೈಸುವುದು.
ಪೈವಳಿಕೆನಗರದಲ್ಲಿ ಬಿ.ಆರ್. ಸಿ ಜಾಗೃತಿ ತರಗತಿ



ಪೈವಳಿಕೆನಗರ, .17 : ಪೈವಳಿಕೆ ಪಂಚಾಯತಿಗೊಳಪಟ್ಟ ಎಲ್ಲಾ ಶಾಲೆಗಳ ವಿಶೇಷ ಕಲಿಕಾ ಸಾಮಾರ್ಥ್ಯದ ಮಕ್ಕಳ ರಕ್ಷಕರ ಜಾಗೃತಿಶಿಬಿರ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಶಾಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಹಯರ್ ಸೆಕೆಂಡರಿ ಹಿರಿಯ ಶಿಕ್ಷಕರಾದ ಶ್ರೀ ನಾರಾಯಣ ರಾವ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸ ಭಟ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬಿ.ಆರ್.ಸಿ ಯ ತರಬೇತುದಾರರಾದ ಅಶ್ವತಿ ನಾಯರ್, ಉಷಾ ವಿನ್ಸೆಂಟ್, ಜೋನ್ ಸನ್ ಫರ್ನಾಂಡಿಸ್ ತರಗತಿ ನಡೆಸಿಕೊಟ್ಟರು. ವಿಶೇಷ ಕಲಿಕಾ ಸಾಮಾರ್ಥ್ಯದ ಮಕ್ಕಳ ಜವಾಬ್ದಾರಿಯ ಶಿಕ್ಷಕ ಶ್ರೀ ಜಿಲ್ಜೋ. ಎನ್ ಕಾರ್ಯಕ್ರಮ ನಡೆಸಿಕೊಟ್ಟರು. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಶಾಲೆಗಳ ರಕ್ಷಕರು ಭಾಗವಹಿಸಿದ್ದರು.(ಪೈನಗರ್ ವಿಷನ್ ಆರೋಗ್ಯಲೋಕ ವರದಿ)




ಪೈವಳಿಕೆನಗರ ಶಾಲೆಯಲ್ಲಿ ರಕ್ಷಕರ ಸಮ್ಮೇಳನ




ಪೈವಳಿಕೆನಗರ, .14 : ಕೇರಳ ರಾಜ್ಯದ ವಿದ್ಯಾಭ್ಯಾಸ ಇಲಾಖೆಯ ವಿಶೇಷ ಆದೇಶದಂತೆ ಎಲ್ಲಾ ಶಾಲೆಗಳಲ್ಲಿ ರಕ್ಷಕರ ಸಮ್ಮೇಳನ ನಡೆಸುವಕಾರ್ಯಕ್ರಮದ ಅಂಗವಾಗಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ರಕ್ಷಕರ ಸಮ್ಮೇಳನ ನಡೆಸಲಾಯಿತು. ಶಾಲಾ ಸಬಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲೋರೆನ್ಸ್ ಡಿಸೋಜಾ ಉದ್ಘಾಟಿಸಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ್ .ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳನ್ನು ನಾಳಿನ ಉತ್ತಮ ಪೌರರನ್ನಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು. ಕ್ಲೀನ್ ಸ್ಕೂಲ್ ಸ್ಮಾರ್ಟ್ ಸ್ಕೂಲ್ ಎಂಬ ವಿಷಯದ ಬಗ್ಗೆ ಹಿರಿಯ ಶಿಕ್ಷಕರಾದ ಶ್ರೀ ವಿಜಯಕುಮಾರ್ ಪೆರ್ಮುದೆ ತರಗತಿ ನಡಸಿದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀಧರ ಭಟ್ ಸ್ವಾಗತಿಸಿ ಪ್ರವೀಣ್ ಕನಿಯಾಲ ವಂದಿಸಿದರು. ಪ್ರಶಾಂತ್ ಕುಮಾರ್ ಅಮ್ಮೇರಿ ಕಾರ್ಯಕ್ರಮ ನಡೆಸಿಕೊಟ್ಟರು.

ಪೈವಳಿಕೆನಗರ ಶಾಲೆಯಲ್ಲಿ ಮಕ್ಕಳ ದಿನಾಚರಣೆ


ಪೈವಳಿಕೆನಗರ: ಸಾಕ್ಷರ ಕಾರ್ಯಕ್ರಮದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಜಿ.ಎಚ್.ಎಸ್.ಎಸ್. ಪೈವಳಿಕೆನಗರ ಶಾಲೆಯಲ್ಲಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ವಿಜಯಕುಮಾರ್ ಪೆರ್ಮುದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕರಾದ ಶ್ರೀ ಶ್ರೀಧರ ಭಟ್ ಪ್ರಸ್ತಾವನಾ ಭಾಷಣ ಮಾಡಿದರು. ಗೋಪಣ್ಣ ಮಾಸ್ತರ್, ರೇಶ್ಮಾ ಟೀಚರ್ ಶುಭಾಶಂಸನೆಗೈದರು. ವಿದ್ಯಾರ್ಥಿಗಳಿಂದ ಅಭಿನಯಗೀತೆ, ಕಥೆ, ನೃತ್ಯ, ಒಪ್ಪನ ಮುಂತಾದ ಕಲಾ ಪ್ರಕಾರಗಳ ಪ್ರದರ್ಶನಗೊಂಡಿತು. ಶ್ರೀಧರ ಭಟ್ ಸ್ವಾಗತಿಸಿ, ಬಾಲಕೃಷ್ಣ ಮಾಸ್ತರ್ ಕಾಯರ್ ಕಟ್ಟೆ ವಂದಿಸಿದರು. ಪ್ರಶಾಂತ್ ಕುಮಾರ್ ಅಮ್ಮೇರಿ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment