BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಜಿಲ್ಲಾ ವಿಜ್ಞಾನ ಮೇಳಕ್ಕೆ ಕ್ಷಣಗಣನೆ

ಕಾಸರಗೋಡು, .1 : ಕಾಸರಗೋಡು ಕಂದಾಯ ಜಿಲ್ಲಾ ವಿಜ್ಞಾನ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ಉಪಜಿಲ್ಲೆಗಳಿಂದ ವಿಜೇತರಾದ ವಿದ್ಯಾರ್ಥಿಗಳು ಇದರಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಈ ಉತ್ಸವವು ನವೆಂಬರ್ 17 ಮತ್ತು 18ರಂದು ಟಿ..ಎಚ್.ಎಸ್. ನಾಯಮಾರ್ ಮೂಲೆಯಲ್ಲಿ ನಡೆಯಲಿದೆ. ಈ ಶಾಲೆಯು ಕಾಸರಗೋಡು ಪೇಟೆಯಿಂದ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಕಿಲೋಮೀಟರ್ ದೂರದಲ್ಲಿದೆ. ಈ ಶಾಲೆಯು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕರ ಕಛೇರಿಯಿಂದ ಕೂಗಳತೆಯ ದೂರದಲ್ಲಿದೆ. ನವೆಂಬರ್ 17ರಂದು ವಿಜ್ಞಾನ, ವೃತ್ತಿ ಪರಿಚಯ ಮತ್ತು ಐಟಿ ಮೇಳಗಳು ನಡೆಯಲಿದೆ. ನವೆಂಬರ್ 18ರಂದು ಗಣಿತ ಮತ್ತು ಸಮಾಜವಿಜ್ಞಾನ ಮೇಳಗಳು ನಡೆಯಲಿದೆ ಎಂದು ಕಾಸರಗೋಡು ಜಿಲ್ಲಾ ವಿಜ್ಞಾನ ಕ್ಲಬ್ ನ ಕಾರ್ಯದರ್ಶಿ ಶ್ರೀ ಎಂ.ಕೆ. ಚಂದ್ರಶೇಖರನ್ ಪೈನಗರ್ ವಿಷನ್ ಗೆ ತಿಳಿಸಿದ್ದಾರೆ. ನವಂಬರ್ 1 ಶನಿವಾರ ಉನ್ನತ ಅಧಿಕಾರಿಗಳ ಸಭೆಯಲ್ಲಿ ದಿನಾಂಕವನ್ನು ನಿರ್ಧರಿಸಲಾಯಿತು. ಕಳೆದ ಬಾರಿ ವಿಜ್ಞಾನ ಮೇಳವು ಕಣ್ಣೂರು ಗಡಿ ಪ್ರದೇಶದಲ್ಲಿ ನಡೆದಿತ್ತು. ಇದರಿಂದಾಗಿ ಮಂಜೇಶ್ವರ ಉಪಜಿಲ್ಲೆಯ ಸ್ಪರ್ಧಿಗಳಿಗೆ ಸಕಾಲದಲ್ಲಿ ಕಾರ್ಯಕ್ರಮಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕಾಸರಗೋಡು ಜಿಲ್ಲಾ ಕೇಂದ್ರ ದ ಸಮೀಪವೇ ನಡೆಯುವ ಕಾರಣ ಕುಂಬಳೆ ಮತ್ತು ಮಂಜೇಶ್ವರ ಉಪಜಿಲ್ಲೆಯ ಸ್ಪರ್ಧಿಗಳಿಗೆ ಅನುಕೂಲವಾಗಲಿದೆ. ಮೇಳಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸ್ಪರ್ಧಾ ಕೇಂದ್ರ ಕ್ಕೆ ಆಗಮಿಸುವುದು ತಡವಾದರೆ ಸ್ಪರ್ಧೆಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುವುದು ಸರ್ವೇ ಸಾಮಾನ್ಯ. ವೃತ್ತಿ ಪರಿಚಯ ಮೇಳದಲ್ಲಿ ಈ ಸಮಸ್ಯೆಯ ಬಗ್ಗೆ ಸ್ಪರ್ಧಾರ್ಥಿಗಳು ಹೇಳಿಕೊಳ್ಳುವುದಿದೆ.(ಪೈನಗರ್ ವಿಷನ್ ವಿಜ್ಞಾನ ಮೇಳ ವರದಿ )

ಸಾಹಿತ್ಯವು ಜೀವನ ಮೌಲ್ಯಗಳನ್ನು ಕಲಿಸುತ್ತದೆ : ಶ್ರದ್ಧಾ.ಎನ್

ಮೂಡಬಿದಿರೆ, .31: ಸಾಹಿತ್ಯವು ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಇದನ್ನು ಕಡೆಗಣಿಸಿದರೆ ಅದು ನಕಾರಾತ್ಮಕ ಘಟಕಗಳ ಬೆಳವಣಿಗೆಗೆ ಕಾರಣವಾಗುತ್ತದೆ.ಮಕ್ಕಳ ಮನಸ್ಸು ಒದ್ದೆ ಗೋಡೆಯಂತೆ. ಅದನ್ನು ಧನಾತ್ಮಕ ಹಾದಿಯಲ್ಲಿ ಬೆಳೆಸೋಣ ಎಂದು ಶ್ರದ್ಧಾ. ಎನ್ ಅಭಿಪ್ರಾಯಪಟ್ಟರು. ಅವರು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ವಿದ್ಯಾರ್ಥಿಸಿರಿ 2014 ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಗಿನ್ನೆಸ್ ದಾಖಲೆಯ ಚಲನಚಿತ್ರ ನಟ, ನಿರ್ದೇಶಕ ಮಾಸ್ಟರ್ ಕಿಶನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. (ಪೈನಗರ್ ವಿಷನ್ ಪ್ರತಿಭಾಲೋಕ ವರದಿ)

No comments:

Post a Comment